12:05 PM Tuesday22 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ…

ಇತ್ತೀಚಿನ ಸುದ್ದಿ

ಮಂಗಳೂರಿಗೆ ಬಂದ ಪ್ರಧಾನಿ ಏರ್ ಫೋರ್ಟ್ ಗೆ ಕೋಟಿ- ಚೆನ್ನಯ ನಾಮಕರಣ ಮಾಡಲಿ: ಖಾದರ್

01/09/2022, 10:49

ಮಂಗಳೂರು(reporterkarnataka.com): ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವುದು ತುಂಬಾ ಸಂತೋಷದ ವಿಷಯ. ಪ್ರಧಾನಿ ಆಗಮನ ಹೆಮ್ಮೆಯ ಸಂಗತಿ. ಆದರೆ ಅದಕ್ಕಾಗಿ ಸರಕಾರಿ ಯಂತ್ರ ದುರುಪಯೋಗಪಡಿಸುವುದು ಸರಿಯಲ್ಲ ಎಂದು ಪ್ರತಿಪಕ್ಷದ ನಾಯಕ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿ ಗ್ರಾಮದಿಂದ 250 ಮಂದಿಯನ್ನು ಕರೆತರುವಂತೆ ಪಿಡಿಓಗಳಿಗೆ ಸೂಚಿಸಲಾಗಿದೆ. ಎರಡು ಜಿಲ್ಲೆಯ ಗ್ರಾಪಂಗಳಿಂದ ಇಷ್ಟೊಂದು ಜನ ಬಂದರೆ ಕಾರ್ಯಕ್ರಮ ನಡೆಯುವ ಮೈದಾನ ಸಾಕಾಗುತ್ತಾ ಎಂದು ಪ್ರಶ್ನಿಸಿದರು.

ಇವರಿಗೆ ಕಾರ್ಯಕ್ರಮ ಮಾಡಲು ಮೈದಾನಕ್ಕಿಂತ ದೊಡ್ಡ ಜಾಗಬೇಕು ಅಂತಾ ಕಾಣಿಸುತ್ತಿದೆ. ಗ್ರಾಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವರಿಗೂ ನೋಟಿಸ್ ಹೋಗಿದೆ.

ಮೋದಿ ಮಂಗಳೂರಿಗೆ ಬರುವುದು ಸಂತೋಷ. ಅದನ್ನು ಸ್ವಾಗತಿಸುತ್ತೇವೆ. ದೇಶದ ಪ್ರಧಾನ ಮಂತ್ರಿ ಜಿಲ್ಲೆಗೆ ಬಂದಾಗ ಜಿಲ್ಲೆಗೆ ಸಿಕ್ಕ ಕೊಡುಗೆ ಬಗ್ಗೆ ಜನರು ನಿರೀಕ್ಷಿತರಾಗಿದ್ದಾರೆ. ಬಿಜೆಪಿ ಪ್ರತಿನಿಧಿಗಳು ಸಾವಿರಾರು ಕೋಟಿ ಯೋಜನೆಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾವಿರಾರು ಕೋಟಿ ಯೋಜನೆ ಅರ್ಪಿಸುವುದು ಯಾವುದು. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟಿದೆ? ಎಂಬುದು ಗೊತ್ತಾಗಬೇಕು ಎಂದರು.

ಎನ್ಎಂಪಿಟಿ ಹಿಂದೆ ಸರ್ಕಾರದಲ್ಲಿ ಇತ್ತು. ಇದನ್ನು ಈಗ ಕೆಲವು ಉದ್ದಿಮೆದಾರರಿಗೆ ನೀಡಿದ್ದಾರೆ. ಜಿಂದಾಲ್ ಪ್ಯಾಕ್ಟರಿಯ ಜೆ ಎಸ್ ಡಬ್ಲ್ಯು, ಬೇರೆ ಬೇರೆ ಖಾಸಗಿ ಕಂಪೆನಿಯ ದೊಡ್ಡ ದೊಡ್ಡ ಟ್ಯಾಂಕ್, ಪಾಮೋಲಿವ್ ಕಂಪೆನಿಯ ಯೋಜನೆಗೆ ಬರುತ್ತಿದ್ದಾರೆ. ಈ ಯೋಜನೆಗೆ ಸರ್ಕಾರ ದುಡ್ಡು ಹಾಕಿದೆಯೇ? ಎಂಬುದನ್ನು ತಿಳಿಸಬೇಕು. ಯಾರದೋ ಕೆಲಸ ಇವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ್ಯ ಏರ್ ಪೋರ್ಟ್ ಎಂದು ಘೋಷಿಸಲಿ. ಇದು ಸರ್ಕಾರದ ದುಡ್ಡಿನಲ್ಲಿ ನಡೆಯುವ ಕಾರ್ಯಕ್ರಮ. ಎಲ್ಲರನ್ನು ಕರೆದರೂ ಶಾಸಕನಾಗಿರುವ ನನ್ನನ್ನು ಕರೆದಿಲ್ಲ. ಆಹ್ವಾನ ಬಂದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆಲೋಚಿಸುತ್ತೇನೆ ಎಂದರು.

ನಾನು ಕಾರ್ಯಕ್ರಮದಲ್ಲಿ ಇದ್ದರೆ ನಮ್ಮನ್ನು ಟೀಕಿಸಲು ಅವರಿಗೆ ಮುಜುಗರ ಆಗುವುದನ್ನು ತಪ್ಪಿಸಲು ಬಹುಷ ನಮ್ಮನ್ನು ಹೊರಗಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು