10:41 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಗಲಿಗೆ ಕೈ ಹಾಕಿದ ಲಾರ್ಡ್ ಗಣೇಶ!: ಕಾಫಿನಾಡಿನಲ್ಲಿ ಭಾರೀ ಬೇಡಿಕೆ

30/08/2022, 09:14

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka.com

ಲಾರ್ಡ್ ಗಣೇಶ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಗಲ ಮೇಲೆ ಕೈಹಾಕಿ ನಿಂತಿರೋ ಗಣೇಶನ ಮೂರ್ತಿಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಭಾರೀ ಬೇಡಿಕೆ ಬಂದಿದೆ. 


ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಹತ್ತಾರು ವರ್ಷಗಳಿಂದ ನಾನಾ ರೀತಿಯ ಗಣಪತಿ ಮೂರ್ತಿಯನ್ನ ಮಾಡುತ್ತಿದ್ದಾರೆ. ಈ ವರ್ಷ ಪುನೀತ್ ಅಗಲಿಕೆಯಿಂದ ಅವರ ಅಭಿಮಾನಿಯ ಆದ ಕಲಾವಿದ ಚಂದ್ರು ಹಾಗೂ ಪ್ರಸನ್ನ ಎಂಬುವರು ಈ ಅದ್ಭುತ ಮೂರ್ತಿಯನ್ನ ನಿರ್ಮಿಸಿದ್ದಾರೆ. ತರೀಕೆರೆ ಪಟ್ಟಣದ ಮೋಹಿತ್ ಕುಮಾರ್ ಎಂಬುವರು ಈ ಮೂರ್ತಿಯನ್ನ ಹೇಳಿ ಮಾಡಿಸಿದ್ದಾರೆ. ಗಣೇಶನ ಜೊತೆ ಪುನೀತ್ ಕುಮಾರ್ ನಿಂತಿದ್ದು, ಗಣೇಶ ಅಪ್ಪುವಿನ ಹೆಗಲ ಮೇಲೆ ಕೈಹಾಕಿದ್ದಾನೆ. ಈ ಮೂರ್ತಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಗಣಪತಿ ಮಾಡುವ ಸ್ಥಳಕ್ಕೆ ಬಂದು ಇದನ್ನ ನೋಡುವ ಎಲ್ಲಾ ಯುವಕರು ಈ ಮೂರ್ತಿ ನಮಗೆ ಬೇಕು ಕೊಡಿ ಎಂದು ಕೇಳುತ್ತಿದ್ದಾರೆ. ಸುಮಾರು 10 ಸಾವಿರ ಮೌಲ್ಯದ ಈ ಗಣಪತಿಗೆ ಮೋಹಿತ್ ಕುಮಾರ್ ಅಡ್ವಾನ್ಸ್ ಆಗಿ ಹಣವನ್ನೂ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡುತ್ತಿರುವ ಯುವಕರು 15-20 ಸಾವಿರ ಕೊಡುತ್ತೇವೆ ಎಂದು ಕೇಳುತ್ತಿದ್ದಾರೆ. ಆದರೆ, ಚಂದ್ರು ಅವರು ಇದನ್ನ ಯಾರಿಗೂ ನೀಡಿಲ್ಲ. ಇನ್ನೂ ತರೀಕೆರೆ ಪಟ್ಟಣದ ಕುಂಬಾರಬೀದಿಯ ಪುಟ್ಟಣ್ಣ ಎಂಬ ಕಲಾವಿದ ಕೂಡ ಗಣಪತಿ ಜೊತೆ ಅಪ್ಪು ಇರುವ ಮೂರ್ತಿ ಕೂಡ ಮಾಡಿದ್ದು ಈ ಮೂರ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಗಣಪತಿಯ ಎಡೆಭಾಗದಲ್ಲಿ ಗೌರಿ ಇರುವಂತೆ ಸ್ಥಳ ಬಿಟ್ಟಿದ್ದು ಬಲಭಾಗದಲ್ಲಿ ಪುನೀತ್ ರಾಜ್ ಕುಮಾರ್ ಇರುವಂತೆ ಮೂರ್ತಿಯನ್ನ ರಚಿಸಿದ್ದಾರೆ. ಹತ್ತಾರು ವರ್ಷಗಳಿಂದ ಗಣಪತಿ ಮೂರ್ತಿ ಮಾಡಿಕೊಂಡು ಬರುತ್ತಿರುವ ಈ ಕಲಾವಿದರ ಈ ವರ್ಷದ ಅಪ್ಪು ಮೂರ್ತಿಗೆ ಭಾರೀ ಬೇಡಿಕೆ ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು