ಇತ್ತೀಚಿನ ಸುದ್ದಿ
ಪಿಯು ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್: 1.9 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, ಹಣ ಸುಲಿಗೆ ಮಾಡಿದ ಪ್ರಿಯಕರ
28/08/2022, 19:53
ಬೆಂಗಳೂರು (reporterkarnataka.com):
ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರಿಯಕರ ಬ್ಲಾಕ್‌ಮೇಲ್ ಮಾಡಿ 1.9 ಕೆಜಿ ಚಿನ್ನ ಹಾಗೂ 5 ಕೆಜಿ ಬೆಳ್ಳಿ ವಸ್ತುಗಳನ್ನು ಸುಲಿಗೆ ಮಾಡಿದ ಘಟನೆ
ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತನ್ನೊಂದಿಗಿರುವ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ
ಪ್ರಿಯಕರ ಸುಮಿತ್ ಎಂಬಾತ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡಿ 1.9 ಕೆಜಿ ಚಿನ್ನ ಹಾಗೂ 5 ಕೆಜಿ ಬೆಳ್ಳಿ ವಸ್ತುಗಳನ್ನು ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಯುವಕನನ್ನು ಬ್ಯಾಟರಾಯಪುರ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 300 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಆಕೆಯನ್ನು ಭೇಟಿಯಾಗಿ ಸುಮಿತ್,ನೀನು ಹಣ ಕೊಡದೆ ಹೋದರೆ ನನ್ನ ಮೊಬೈಲ್‌ನಲ್ಲಿರುವ ತೆಗೆದಿರುವ ಫೋಟೋಗಳನ್ನು ಆಶ್ಲೀಲ ರೀತಿ ಎಡಿಟ್ ಮಾಡಿ ನಿಮ್ಮ ತಂದೆಗೆ ತೋರಿಸುತ್ತೇನೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಹರಿಬಿಡುತ್ತೇನೆ ಎಂದು ಸಂತ್ರಸ್ತೆಗೆ ಆತ ಬೆದರಿಸಿದ್ದ.
ಬ್ಲಾಕ್‌ಮೇಲ್‌ಗೆ ಹೆದರಿ ಆಕೆ, ಮೊದ ಮೊದಲು ಮನೆಯಲ್ಲಿ ತಂದೆಗೆ ತಿಳಿಯದಂತೆ .2,500 ರಿಂದ 10 ಸಾವಿರ ರವರೆಗೆ ಕೊಟ್ಟಿದ್ದಳು. ಪದೇ ಪದೇ ಆತ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಕೆಲ ದಿನಗಳ ಹಿಂದೆ ಮಾತನಾಡುವ ನೆಪದಲ್ಲಿ ಸಂತ್ರಸ್ತೆಯನ್ನು ಆರೋಪಿ ಕರೆಸಿಕೊಂಡಿದ್ದ. ಆಗ ಕುಡಿಯಲು ನೀರಿನ ಬಾಟಲ್ ಕೊಟ್ಟಿದ್ದ ಆತ, ‘ನೀರು ಕುಡಿದ ಬಳಿಕ ಅದರಲ್ಲಿ ಡ್ರಗ್‌್ಸ ಮಿಶ್ರಣ ಮಾಡಲಾಗಿತ್ತು.
ಮನೆಯಲ್ಲಿರುವ ಬಂಗಾರ ತಂದು ಕೊಡದೆ ಹೋದರೆ ಆಶ್ಲೀಲ ವಿಡಿಯೋ ಸಾರ್ವಜನಿಕವಾಗಿ ಪ್ರದರ್ಶಿಸುತ್ತೇನೆ ಎಂದು ಬೆದರಿಸಿದ್ದ. ಈ ಮಾತಿಗೆ ಭೀತಿಗೊಂಡ ಆಕೆ, ಮನೆಯಲ್ಲಿದ್ದ 1.900 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಹೋಗಿ ಆರೋಪಿಗೆ ಕೊಟ್ಟಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.
ಕೆಲ ದಿನಗಳ ಹಿಂದೆ ಮನೆಯಲ್ಲಿದ್ದ ಚಿನ್ನಕ್ಕೆ ವಿಮೆ ನವೀಕರಣ ಮಾಡಿಸುವ ಮಾಡಿಸುವ ಸಲುವಾಗಿ ಸಂತ್ರಸ್ತೆಯ ತಂದೆ, ಮನೆಯಲ್ಲಿದ್ದ ಬಂಗಾರವನ್ನು ತೆಗೆದುಕೊಳ್ಳಲು ಹೋಗಿದ್ದಾರೆ. ಆದರೆ ಆ ವೇಳೆ ಬಾಕ್ಸ್‌ಗಳಲ್ಲಿ ಚಿನ್ನ ಕಾಣದೆ ಗಾಬರಿಗೊಂಡಿದ್ದಾರೆ. ಆಗ ಮಗಳನ್ನು ವಿಚಾರಿಸಿದಾಗ ಸುಲಿಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.