ಇತ್ತೀಚಿನ ಸುದ್ದಿ
ನಾವುಂದ ಅರೆಹೊಳೆ ಸೇತುವೆ ಬಳಿ ಮಲಗಿದ ಸ್ಥಿತಿಯಲ್ಲೆ ವ್ಯಕ್ತಿಯ ಮೃತದೇಹ ಪತ್ತೆ
26/08/2022, 12:46
ಬೈಂದೂರು(reporterkarnataka.com): ಮಲಗಿದ ಸ್ಥಿತಿಯಲ್ಲೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆ ಸೇತುವೆ ಬಳಿ ಆ.24ರಂದು ನಡೆದಿದೆ.
ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ ಅವರಿಗೆ ಅರೆಹೊಳೆ ಸೇತುವೆ ಬಳಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಅವರು ಹೋಗಿ ನೋಡಿದಾಗ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ವ್ಯಕ್ತಿ ಯಾವುದೇ ಕಾಯಿಲೆಯಿಂದ 2 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.