ಇತ್ತೀಚಿನ ಸುದ್ದಿ
ದೆಹಲಿಯಲ್ಲಿ ಆಪರೇಷನ್ ಕಮಲ ವಿಫಲ; 62 ಶಾಸಕರ ಪೈಕಿ 53 ಮಂದಿ ಹಾಜರು: ಸೌರಭ್ ಭಾರದ್ವಾಜ್
26/08/2022, 10:54
ಹೊಸದಿಲ್ಲಿ(reporterkarnataka.com): ಆಮ್ ಆದ್ಮಿ ಪಕ್ಷದ ಕೆಲ ಶಾಸಕರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಯ ನಡುವೆ, ಪಕ್ಷದ ಮಹತ್ವದ ಸಭೆಯಲ್ಲಿ 62 ಶಾಸಕರ ಪೈಕಿ 53 ಶಾಸಕರು ಹಾಜರಿದ್ದಾರೆ. ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಈ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಿದೆ. 62 ಶಾಸಕರ ಪೈಕಿ 53 ಶಾಸಕರು ಇಂದು ಸಭೆಯಲ್ಲಿ ಹಾಜರಿದ್ದರು. ಸ್ಪೀಕರ್ ಹೊರ ದೇಶದಲ್ಲಿದ್ದು, ಮನೀಶ್ ಸಿಸೋಡಿಯಾ ಹಿಮಾಚಲದಲ್ಲಿದ್ದಾರೆ. ಸಿಎಂ ಇತರ ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ವೇಳೆ ಎಲ್ಲರೂ ತಮ್ಮ ಕೊನೆಯ ಉಸಿರು ಇರುವವರೆಗೂ ಸಿಎಂ ಕೇಜ್ರಿವಾಲ್ ಅವರೊಂದಿಗೆ ಇರುವುದಾಗಿ ಹೇಳಿದರು ಎಂದು ಸೌರಭ್ ಭಾರದ್ವಾಜ್ ಹೇಳಿದರು.
ಅಲ್ಲದೆ 40 ಶಾಸಕರಿಗೆ ತಲಾ ₹20 ಕೋಟಿಯಂತೆ ₹800 ಕೋಟಿ ಆಮಿಷ ಒಡ್ಡಲು ದುಡ್ಡು ಎಲ್ಲಿಂದ ಬಂದಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸಬೇಕು ಎಂದು ಭಾರದ್ವಾಜ್ ಒತ್ತಾಯಿಸಿದ್ದಾರೆ.