4:47 PM Saturday31 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ

25/08/2022, 23:20

ಮಂಗಳೂರು(reporterkarnataka.com):ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿಯ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿತು. 

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ ಅವರು 5ನೇಯ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಸಮಾಜದ ಮಹತ್ತರವಾದ ಸೇವೆಗೆ ಲಯನ್ಸ್ ಕ್ಲಬ್ ಶಾಖೆಗಳನ್ನು ವಿಸ್ತರಿಸುವ ಮೂಲಕ ನೇರ ಸ್ಪಂದನೆಗೆ ಪೂರಕ ಎಂದು ಹೇಳಿದರು.


ಲಯನ್ಸ್ ಕ್ಲಬ್ ಮಂಗಳೂರು ಕುಡ್ಲದ ಅಧ್ಯಕ್ಷ ಜ್ಞಾನೇಶ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ನೂತನ ಸಂಸ್ಥೆಯ ವಿಸ್ತರಣಾಧಿಕಾರಿ ಹರೀಶ್ ಆಳ್ವ, 
ಚಂದ್ರಹಾಸ ರೈ, ನೂತನ ಸಂಸ್ಥೆಯ ಸಲಹೆಗಾರರಾದ ಶ್ರೀಧರ್ ಶೆಟ್ಟಿ, ಕೃಷ್ಣಾನಂದ ಶೆಣೈರವರ ಮುತುವರ್ಜಿಯಲ್ಲಿ ಆರಂಭಗೊಂಡ ಲಯನ್ಸ್ ಕ್ಲಬ್ ಸ್ಮಾರ್ಟ್ ಸಿಟಿಯ ಸ್ಥಾಪಕ ಅಧ್ಯಕ್ಷರಾಗಿ  ಜಿ. ಕೆ. ಹರಿಪ್ರಸಾದ ರೈ ಕಾರಮೊಗರುಗುತ್ತು, ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಕೋಶಾಧಿಕಾರಿ ರಂಜಿತ್ ಶೆಟ್ಟಿ ಗುರುಪುರ, ಅಧಿಕಾರ ಸ್ವೀಕರಿಸಿದರು. ನೂತನ ಸದಸ್ಯರುಗಳಿಗೆ ಪ್ರಮಾಣವಚನವನ್ನು ಪ್ರಥಮ ಉಪ ಗವರ್ನರ್  ಡಾ. ಮೆಲ್ವಿನ್ ಡಿಸೋಜ ಮತ್ತು ನಿಕಟಪೂರ್ವ ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ  ಬೋಧಿಸಿದರು. ಜಿಲ್ಲಾ ಕಾರ್ಯದರ್ಶಿ ಅನಿಲ್ ಕುಮಾರ್, ಜಿಇ ಟಿ ಶಶಿಧರ್ ಮಾರ್ಲ, ಪ್ರಾಂತ್ಯಧ್ಯಕ್ಷರಾದ ಜ್ಯೋತಿ ಶ್ರೀಧರ  ಶೆಟ್ಟಿ, ವಲಯಾಧ್ಯಕ್ಷರಾದ ಮೋಹನ್ ಕೊಪ್ಪಲ್, ಲಯನ್ಸ್ ಕ್ಲಬ್ ಮಂಗಳೂರು ಕುಡ್ಲದ ಕಾರ್ಯದರ್ಶಿ ಸುನಿಲ್ ಕುಮಾರ್, ಯೋಗೀಶ್  ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ  ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಾದ ರಾಷ್ಟ್ರಕ್ಕಾಗಿ ಮಿಲಿಟರಿಯಲ್ಲಿ ಸೇವೆಗೈದ ಗುಡ್ಡೆಗುತ್ತು ಭುಜಂಗಶೆಟ್ಟಿ, ರೈಲ್ವೆ ಪೊಲೀಸ್ ಠಾಣೆಯ ಮಂಗಳೂರಿನ ಪೊಲೀಸ್ ನಿರ್ದೇಶಕರಾದ ಮೋಹನ್ ಕೊಟ್ಟಾರಿ, ಪ್ರಗತಿಪರ ರೈತ ಹರಿಪ್ರಸಾದ್ ಕಜೆಗುತ್ತು, ಹಿರಿಯ ದೈವ ನರ್ತಕ ಶೀನಾ ಪಾಣರ, 90 ವರ್ಷದ ಜನಾಬು ಅಬ್ದುಲ್ ಕರೀಮ್ ಅಡ್ಡೂರು, ವಿಶೇಷ ಸಾಧನೆಗೆ ಡಾ. ರೇಷ್ಮ ಉಳ್ಳಾಲ್, ಮಿಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಪ್ಲೇವಿ ಡಿಮೆಲೋ ಮುಂತಾದವರನ್ನು ಸನ್ಮಾನಿಸಲಾಯಿತು. 

ಲಯನ್ಸ್ ಕ್ಲಬ್ ಮಂಗಳೂರು ಕುಡ್ಲದ ಪ್ರಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್  ಕ್ಲಬ್ ಮಂಗಳೂರು ಕುಡ್ಲದ ಅಧ್ಯಕ್ಷ

ಜ್ಞಾನೇಶ್ ಆಳ್ವ ಸ್ವಾಗತಿಸಿದರು. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಮೋಹನ್ ಶಿರ್ಲಾಲ್ ವಂದಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು