5:53 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಕಂಪ್ಲಿ: ಸ್ಮಶಾನಕ್ಕೆ ದಾರಿ ಒದಗಿಸಿಕೊಡಲು ರಾಜ್ಯ ದಲಿತ ಸಂಘದ ವತಿಯಿಂದ ಮನವಿ

25/08/2022, 13:58

ದೊಡ್ಡ ಬಸವರಾಜ ಬಡಗಿ ಕಂಪ್ಲಿ ಬಳ್ಳಾರಿ

info.reporterkarnataka@gmail.com

ಕಂಪ್ಲಿ ತಾಲೂಕಿನ ಬೆಳಗೋಡು ಗ್ರಾಮದ ಗ್ರಾಮದ ಮುಸ್ಲಿಂ ಜನಾಂಗದ ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಇಲ್ಲದ ಕಾರಣ ಸ್ಮಶಾನಕ್ಕೆ ದಾರಿ ಮಾಡಿಕೊಡಲು ಕಂಪ್ಲಿ ತಾಲೂಕಿನ ಉಪ ತಹಶೀಲ್ದಾರ್ ರವೀಂದ್ರ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಡಾ. ಬಿ.ಆರ್ ಅಂಬೇಡ್ಕರ್ ದಲಿತ ಸಂಘದ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ನಂತರ ಕರ್ನಾಟಕ ರಾಜ್ಯ ದಲಿತ ಸಂಘದ ರಾಜ್ಯಾಧ್ಯಕ್ಷ ಕೆ. ರಾಮಕೃಷ್ಣ ಅವರು ಮಾತನಾಡಿ, ನಮ್ಮ ಬೆಳಗೋಡಾಳ್ ಗ್ರಾಮದ ಸರ್ವೆ ನಂಬರ್ 424/2ರಲ್ಲಿ ಸ್ಮಶಾನ ೪೯ ಸೆಂಟ್ಸ್. ಇದ್ದು ಈ ಸ್ಮಶಾನನ ಮುಸ್ಲಿಂ ಜನಾಂಗಕ್ಕೆ ಸರ್ಕಾರ ಕಾಯ್ದಿರಿಸುತ್ತಾರೆ, ಆದರೆ ಈ ಸ್ಮಶಾನಕ್ಕೆ ಸುಮಾರು ವರ್ಷಗಳಿಂದ ದಾರಿ ಇರುವುದಿಲ್ಲ ಕಾರಣ ಈ ಸ್ಮಶಾನ ಮುಂದೆ ಪಟ್ಟದಾರರ ರೈತರ ಜಮೀನುಗಳು ಇದ್ದು ಮತ್ತು ಈ ಜಮೀನಿನಿಂದ ಮುಂದೆ ವಿಜಯನಗರ ಕಾಲವೇ ರಸ್ತೆ ಇರುತ್ತದೆ. ಅಂದರೆ ಸ್ಮಶಾನ ಮತ್ತು ವಿಜಯನಗರ ಕಾಲವೇ ರಸ್ತೆ ಮಧ್ಯ ಇರುವ ರೈತರ ಜಮೀನಿನಲ್ಲಿ ದಾರಿ ಬಿಡಿಸಿಕೊಡಬೇಕು. ಏಕೆಂದರೆ ಮುಸ್ಲಿಮ್ಸ್ ಜನಾಂಗದವರು ಯಾರಾದರೂ ಮೃತಪಟ್ಟರೆ ಆಸ್ಮಶಾನಕ್ಕೆ ಸಾಗಿಸುವುದಕ್ಕೆ ದಾರಿ ಇರುವುದಿಲ್ಲ. ಬದಲಾಗಿ ಅವರು ರೈತರು ನಾಟಿ ಭತ್ತದ ಹೊಲದಲ್ಲಿ ಶವವನ್ನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ  ಶವವನ್ನು ಹೊತ್ತವರು ಆ ಭತ್ತದ ಗದ್ದೆಯಲ್ಲಿ ಕಾಲು ಸಿಕ್ಕಿಹಾಕಿಕೊಂಡು ಅಥವಾ ಕಾಲು ಜಾರಿಕೊಂಡು ಹೆಣವನ್ನು ಕೆಡವಿಕೊಂಡು ಕೆಸರಿನಲ್ಲಿ ಬಿದ್ದ ಉದಾಹರಣೆಗಳು ಸಾಕಷ್ಟು ತೊಂದರೆಗಳು ಆಗಿವೆ. ಆದುದರಿಂದ ಆ ಸ್ಮಶಾನಕ್ಕೆ ದಾರಿ ಅತ್ಯಾಶಕವಾಗಿರುವುದರಿಂದ ತಾವುಗಳು ಆದಷ್ಟು ಬೇಗನೆ ಗಮನಹರಿಸಿ ದಾರಿ ಮಾಡಿಸಿಕೊಡಬೇಕೆಂದು ನಮ್ಮ ಕರ್ನಾಟಕ ರಾಜ್ಯ ಡಾ. ಬಿ. ಆರ್. ಅಂಬೇಡ್ಕರ್ ದಲಿತ ಸಂಘದ ವತಿಯಿಂದ ಮುಸ್ಲಿಮ್ಸ್ ಸ್ಮಶಾನಕ್ಕೆ ದಾರಿ ಮಾಡಿಸಿ ಕೊಡಬೇಕೆಂದು ಸಂಘಟನೆಯ ವತಿಯಿಂದ ಈ ಮನವಿ ನೀಡುತ್ತಿದ್ದೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿದೆ ಇದ್ದರೆ ನಾವು ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಮುಸ್ಲಿಮ್ಸ್ ಜನಾಂಗದಲ್ಲಿ ಯಾರಾದರೂ ಮೃತಪಟ್ಟರೆ ಆ ಶವವನ್ನು ನಿಮ್ಮ ಕಚೇರಿಯ ಮುಂದೆ ಶವವನ್ನು ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್.ನಾಗರಾಜ್ ಕಂಪ್ಲಿ, ರಾಜ್ಯಾಧ್ಯಕ್ಷರಾದ ಕೆ. ರಾಮಕೃಷ್ಣ, ರಾಜ್ಯ, ಉಪಾಧ್ಯಕ್ಷರಾದ ನಬಿಸಾಬ್ ಬೆಳಗೋಡು, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ನಾಯಕರ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದೊಡ್ಡ ಬಸವರಾಜ್ ಬಡಗಿ, ಜಿಲ್ಲಾಧ್ಯಕ್ಷರಾದ ಎಚ್ ವೆಂಕಟೇಶ್, ತಾಲೂಕ ಅಧ್ಯಕ್ಷರಾದ ಮಂಜುನಾಥ್ ಬಡಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮೊಹಮ್ಮದ್ ರಫಿ ಬಿ, ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಮಡಿವಾಳ ವೀರೇಶ್, ಪ್ರಮುಖರಾದ ಎ ರಾಘವೇಂದ್ರ, ಎನ್ ಮನೋಜ್ ಕುಮಾರ್, ಮಾಯಪ್ಪ ಕಂಪ್ಲಿ, ಜಡಿಯಪ್ಪ ಬೆಳಗೊಡ್, ಕಂಪ್ಲಿ ಕೊಟ್ಟ ರಾಮಾಂಜನಿಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು