ಇತ್ತೀಚಿನ ಸುದ್ದಿ
ಬಿಜೂರು: ದನ ಅಡ್ಡ ಬಂದು ರಸ್ತೆ ಬದಿಯ ಕಂದಕಕ್ಕೆ ಉರುಳಿಬಿದ್ದ ಸಿಮೆಂಟ್ ಲಾರಿ; ಚಾಲಕ ಸಹಿತ 4 ಮಂದಿ ಗಂಭೀರ
24/08/2022, 18:01
ಬಿಜೂರು(reporterkarnataka.com):
ದನವೊಂದು ಅಡ್ಡಬಂದ ಪರಿಣಾಮ ಸಿಮೆಂಟ್ ಸಾಗಾಟದ ಮಿನಿ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಮಗುಚಿಬಿದ್ದ ಘಟನೆ ಬೈಂದೂರು ಸಮೀಪದ ಬಿಜೂರು ಶಾಲೆಬಾಗಿಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಚಾಲಕ ಸಹಿತ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸಿಮೆಂಟ್ ತುಂಬಿದ ಲಾರಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿತ್ತು. ಬಿಜೂರು ಶಾಲೆಬಾಗಿಲು ನಡುವೆ ಇದ್ದಕ್ಕಿದ್ದಂತೆ ದನವೊಂದು ಅಡ್ಡ ಬಂದಿದ್ದು, ಇದರಿಂದ ಚಾಲಕ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ರಸ್ತೆ ಬದಿಯ ಕಂದಕಕ್ಕೆ ಪಲ್ಟಿಯಾಗಿ ಬಿದ್ದಿದೆ. ಅಪಘಾತದ ಪರಿಣಾಮ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆಯಲ್ಲಿ ಲಾರಿಯಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.