8:37 AM Tuesday23 - September 2025
ಬ್ರೇಕಿಂಗ್ ನ್ಯೂಸ್
ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್…

ಇತ್ತೀಚಿನ ಸುದ್ದಿ

ಟ್ಯಾಕ್ಸಿ ಚಾಲಕನ ಕೊಲೆ ಯತ್ನ ಪ್ರಕರಣ; ಬಾಡಿಗೆ ಪ್ರಯಾಣಕ್ಕೆ ಮುನ್ನ ಎಚ್ಚರ ಅಗತ್ಯ: ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ 

24/08/2022, 00:36

ಮಂಗಳೂರು(reporterkarnataka.com): ಬಾಡಿಗೆಗೆ ಟ್ಯಾಕ್ಸಿ ನಿಗದಿ ಮಾಡಿ ಅರ್ಧ ದಾರಿಯಲ್ಲಿ ಚಾಲಕರನ್ನು ಲೂಟಿ ಮಾಡುವ ಹಾಗೂ ಹಲ್ಲೆ ಮಾಡುವ ದುಷ್ಕೃತ್ಯಗಳು ಕರಾವಳಿಯಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಸಲಹೆ ನೀಡಿದೆ.

ಸಂಘದ ಅಧ್ಯಕ್ಷ ದಿನೇಶ್‌ ಕುಂಪಲ ಎಂ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ. 20ರಂದು ಲೇಡಿಗೋಶನ್‌ ಬಳಿಯ ಪಾರ್ಕ್‌ನಿಂದ ಅಬ್ದುಲ್‌ ರಹಿಮಾನ್‌ ಎಂಬ ಟ್ಯಾಕ್ಸಿ ಚಾಲಕರ ಬಳಿ ಬಂದ ಮೂವರು ಅಪರಿಚಿತರು ಸುಬ್ರಹ್ಮಣ್ಯಕ್ಕೆ ಬಾಡಿಗೆ ಗೊತ್ತುಪಡಿಸಿದ್ದರು. ಆ ಬಳಿಕ ಅರ್ಧ ದಾರಿಯಲ್ಲಿ ಮುರುಡೇಶ್ವರಕ್ಕೆ ತೆರಳಲು ಸೂಚಿಸಿದ್ದರು. ಅಲ್ಲಿಗೆ ತೆರಳಿದ ವೇಳೆ ಹೊನ್ನಾವರ ಕಡೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಚಾಲಕನಿಗೆ ಈ ಸಂದರ್ಭ ಅನುಮಾನ ಬಂದು ವಾಹನ ನಿಲ್ಲಿಸಲು ಪ್ರಯತ್ನಿಸುವ ಸಂದರ್ಭ ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರು ಹಠಾತ್ತಾಗಿ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಮಂಕಿ ಠಾಣೆಯ ಬಳಿ ಗಸ್ತು ನಿರತರಾಗಿದ್ದ ಪೊಲೀಸರು ಬಂದು ಚಾಲಕನನ್ನು ರಕ್ಷಿಸಿದ್ದಾರೆ. ಮಾತ್ರವಲ್ಲದೆ ಟ್ಯಾಕ್ಸಿಯಿಂದ ತಪ್ಪಿಸಿ ಓಡಿಹೋಗಲು ಯತ್ನಿಸಿದ್ದ ಮೂವರು ದುಷ್ಕರ್ಮಿಗಳನ್ನು ಸ್ಥಳೀಯರು ಹಾಗೂ ಪೊಲೀಸರು ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ್ದಾರೆ ಎಂದರು.

ಪ್ರಯಾಣಿಕರ ಸೋಗಿನಲ್ಲಿದ್ದ ದುಷ್ಕರ್ಮಿಗಳು ತಮ್ಮ ಜತೆ ಖಾರದ ಪುಡಿ, ಹಗ್ಗ, ಚಾಕುವನ್ನು ಹೊಂದಿದ್ದರು. ಕಾರು ಚಲಾಯಿಸುತ್ತಿರುವಾಗಲೇ ಚಾಲಕ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದ್ದನ್ನು ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಕಂಡು ಸಹಕರಿಸಿದ ಕಾರಣ ಚಾಲಕ ತನ್ನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಚಾಲಕನ ಕೈ ಹಾಗೂ ಕುತ್ತಿಗೆಗೆ ಚೂರಿ ಇರಿತದ ಗಾಯವಾಗಿದೆ. ಬಾಡಿಗೆ ಗೊತ್ತುಪಡಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಈ ತಂಡ ಅಲ್ಲಿ ಚಾಲಕನಿಂದ ವಾಹನವನ್ನು ಬಲವಂತವಾಗಿ ಪಡೆದು ಪರಾರಿಯಾಗುವ ತಂಡ ಇದಾಗಿದೆ. ಇಂತಹ ಹಲವು ಘಟನೆಗಳು ಕೆಲವು ಕಡೆಯಲ್ಲಿ ನಡೆದಿವೆ ಎಂದವರು ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು