ಇತ್ತೀಚಿನ ಸುದ್ದಿ
ತಿಹಾರ್ ಜೈಲಿನಿಂದ ವಂಚನೆ ಪ್ರಕರಣದ ಆರೋಪಿ ಸುಕೇಶ್ ದಂಪತಿ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ಆದೇಶ
23/08/2022, 19:50
ಹೊಸದಿಲ್ಲಿ (reporterkarnataka.com):ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಆತನ ಪತ್ನಿಯನ್ನು ತಿಹಾರ್ ಕಾರಾಗೃಹದಿಂದ ನಗರದ ಮಂಡೋಲಿ ಕಾರಾಗೃಹಕ್ಕೆ ಒಂದು ವಾರದಲ್ಲಿ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ನಮಗೆ ಜೀವ ಬೆದರಿಕೆ ಇದೆ. ನಮ್ಮನ್ನು ಸ್ಥಳಾಂತರಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್.ಭಟ್ ಮತ್ತು ಸುಧಾನ್ಷು ಧುಲಿಯಾ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ನೀಡಿತು.
ಹಣ ಅಕ್ರಮ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ್ದ ಆರೋಪದಡಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ.