ಇತ್ತೀಚಿನ ಸುದ್ದಿ
ಕೂಡ್ಲಿಗಿ ತಾಲೂಕು ಕಾನಿಪ ಧ್ವನಿಯಿಂದ ಪತ್ರಿಕಾ ದಿನಾಚರಣೆ: ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟನೆ
21/08/2022, 18:10
ವಿಜಯನಗರ(reporterkarnataka.com):ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಕಾ.ನಿ.ಪ.ಧ್ವನಿ ಸಂಘಟನೆಯಿಂದ ಕೂಡ್ಲಿಗಿ ನಗರದ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಸಮಾರಂಭವನ್ನು ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.
ಚಾನುಕೋಟಿ ಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಕೂಡ್ಲಿಗಿ ಹಿರೇಮಠ ಸಂಸ್ಥಾನದ ಶ್ರೀಪ್ರಶಾಂತ ಸಾಗರ ಸ್ವಾಮಿಗಳು, ನಂದಿಪುರ ಪುಣ್ಯ ಕ್ಷೇತ್ರದ ಶ್ರೀ ಮಹೇಶ್ವರ ಸ್ವಾಮೀಜಿಗಳು ಹಾಗೂ ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ಶ್ರೀಐಮಡಿ ಶರಣಾಚಾರ್ಯರು ಉಪಸ್ಥಿತರಿದ್ದರು.ವಿಶೇಷ ಉಪನ್ಯಾಸ ನೀಡಿದ ಕಾ.ನಿ.ಪ.ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು, ರಾಜ್ಯದ ಪತ್ರಕರ್ತರ ಏರಿಳಿತಗಳ ಬಗ್ಗೆ ವಿವರಿಸುವುದರ ಜೊತೆಗೆ ಸಮಾಜದಲ್ಲಿ ನಮ್ಮ ಭಾಷೆ ಹಾಗೂ ಬರವಣಿಗೆಯಲ್ಲಿ ಹಿಡಿತದೊಂದಿಗೆ ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆ ನೀಡಬೇಕೆಂದು ಪತ್ರಕರ್ತರಿಗೆ ಕಿವಿ ಮಾತು ಹೇಳಿದರು.





ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಎಲೆ ನಾಗರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ರಘು, ಲೋಕೇಶ್ ನಾಯಕ್, ಕಾವಲಿ ಶಿವಪ್ಪ ನಾಯಕ್, ರಾಜ್ಯ ಕಾರ್ಯದರ್ಶಿಗಳಾದ ಎಂ.ಇಸಾಕ್ ಹಾಗೂ ಇನ್ನೀತರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ ಹಾಗೂ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.














