ಇತ್ತೀಚಿನ ಸುದ್ದಿ
ಕೆನರಾ ಕಾಲೇಜಿನಲ್ಲಿ ಎನ್ನೆಸ್ಸೆಸ್ ನಿಂದ ಸದ್ಭಾವನಾ ದಿನಾಚರಣೆ
21/08/2022, 07:58
ಮಂಗಳೂರು(reporterkarnataka.com): “ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮದೇಶವು ವೈವಿಧ್ಯಮಯವಾದ ಭಾಷೆ, ಧರ್ಮ, ಜಾತಿ, ಸಂಸ್ಕೃತಿಗಳನ್ನೊಳಗೊಂಡಿದ್ದು ಶಾಂತಿ ಸೌಹಾರ್ದದಿಂದ ಬಾಳಲು ಜನರಲ್ಲಿ ಸದ್ಭಾವನೆ ಇರಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ಬಹುರೂಪಿ ಭಾರತವನ್ನು ಬಲಗೊಳಿಸಲು ಇಂತಹ ಸದ್ಭಾವನಾ ದಿನಾಚರಣೆಗಳು ಸಹಕಾರಿಯಾಗುವುದಲ್ಲದೆ ಭಾರತವನ್ನು ಸದೃಢಗೊಳಿಸಿ ಮುಂದಿನ ದಿನಗಳಲ್ಲಿ ವಿಶ್ವ ಗುರುವನ್ನಾಗಿಸಲು ಸಾಧ್ಯ” ಎಂದು ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಗಣೇಶ್ ಶೆಟ್ಟಿ ಹೇಳಿದರು.
ಅವರು ಕಾಲೇಜಿನ ರಾ.ಸೇ.ಯೋ.ಘಟಕಗಳು ಹಮ್ಮಿಕೊಂಡ ಸದ್ಭಾವನಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಮಹತ್ವವನ್ನು ತಿಳಿಸಿಕೊಟ್ಟರು.
ರಾ.ಸೇ.ಯೋ.ಅಧಿಕಾರಿ ಸೀಮಾ ಪ್ರಭು ಸದ್ಭಾವನಾ ದಿನದ ಪ್ರತಿಜ್ಞೆಯನ್ನು ಬೋಧಿಸಿದರು. ಇನ್ನೋರ್ವ ರಾ.ಸೇ.ಯೋ.ಅಧಿಕಾರಿ ವಾಣಿ ಯು.ಎಸ್.ಸ್ವಾಗತಿಸಿದರು. ಸ್ವಯಂಸೇವಕಿ ರಶ್ಮಿ ವಂದಿಸಿದರು. ಸ್ವಯಂಸೇವಕ ಪರಶುರಾಮ ನಿರೂಪಿಸಿದರು.
“ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮದೇಶವು ವೈವಿಧ್ಯಮಯವಾದ ಭಾಷೆ, ಧರ್ಮ, ಜಾತಿ, ಸಂಸ್ಕೃತಿಗಳನ್ನೊಳಗೊಂಡಿದ್ದು ಶಾಂತಿ ಸೌಹಾರ್ದದಿಂದ ಬಾಳಲು ಜನರಲ್ಲಿ ಸದ್ಭಾವನೆ ಇರಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ಬಹುರೂಪಿ ಭಾರತವನ್ನು ಬಲಗೊಳಿಸಲು ಇಂತಹ ಸದ್ಭಾವನಾ ದಿನಾಚರಣೆಗಳು ಸಹಕಾರಿಯಾಗುವುದಲ್ಲದೆ ಭಾರತವನ್ನು ಸದೃಢಗೊಳಿಸಿ ಮುಂದಿನ ದಿನಗಳಲ್ಲಿ ವಿಶ್ವ ಗುರುವನ್ನಾಗಿಸಲು ಸಾಧ್ಯ” ಎಂದು ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಗಣೇಶ್ ಶೆಟ್ಟಿ ಹೇಳಿದರು.
ಅವರು ಕಾಲೇಜಿನ ರಾ.ಸೇ.ಯೋ.ಘಟಕಗಳು ಹಮ್ಮಿಕೊಂಡ ಸದ್ಭಾವನಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಮಹತ್ವವನ್ನು ತಿಳಿಸಿಕೊಟ್ಟರು.
ರಾ.ಸೇ.ಯೋ.ಅಧಿಕಾರಿ ಸೀಮಾ ಪ್ರಭು ಸದ್ಭಾವನಾ ದಿನದ ಪ್ರತಿಜ್ಞೆಯನ್ನು ಬೋಧಿಸಿದರು. ಇನ್ನೋರ್ವ ರಾ.ಸೇ.ಯೋ.ಅಧಿಕಾರಿ ವಾಣಿ ಯು.ಎಸ್.
ಸ್ವಾಗತಿಸಿದರು. ಸ್ವಯಂಸೇವಕಿ ರಶ್ಮಿ ವಂದಿಸಿದರು. ಸ್ವಯಂಸೇವಕ ಪರಶುರಾಮ ನಿರೂಪಿಸಿದರು.