ಇತ್ತೀಚಿನ ಸುದ್ದಿ
ಮಾತಾ ಅಮೃತಾನಂದಮಯಿ ಮಠದಲ್ಲಿ ಸಂಭ್ರಮೋಲ್ಲಾಸದ ಜನ್ಮಾಷ್ಟಮಿ: ಕೃಷ್ಣ ವೇಷ ಸ್ಪರ್ಧೆ
21/08/2022, 01:22

ಮಂಗಳೂರು(reporterkarnataka.com):.ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮೋಲ್ಲಾಸದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಸಾರಥ್ಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಚಿತ್ರಕಲಾ ಪ್ರದರ್ಶನ ಹಾಗೂ ಕೃಷ್ಣ ವೇಷ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.
ಸಂಜೆ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕ,ಯುವತಿಯರು ಭಾಗವಹಿಸಿ ಸಂತೃಪ್ತಿ ಪಡೆದರು.
ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
“ಅಯುಧ್”ನವರಿಂದ ಶ್ರೀ ಕೃಷ್ಣ ಹಾಗೂ ಕೃಷ್ಣನ ಉಪದೇಶಗಳ ಬಗ್ಗೆ ರಸಪ್ರಶ್ನೆ , “ಕೃಷ್ಣಾಮೃತ”ಎಂಬ ವಿಶೇಷ ಕಾರ್ಯಕ್ರಮದ ನಂತರ ಬಾಲಗೋಪಾಲ ಪೂಜೆ, ಭಜನೆ, ಆರತಿ, ಹಾಗೂ ಪ್ರಸಾದ ವಿತರಣೆ ಜರುಗಿತು.
ಅಮೃತ ಯುವ ಧರ್ಮ ಧಾರಾ(” ಅಯುಧ್”), ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಹಾಗೂ ಅಮೃತ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಅಮ್ಮನವರ ಭಕ್ತರು, ಅಮೃತ ವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ, ಶಾಲಾ ಪ್ರಾಂಶುಪಾಲೆ ಡಾ.ಆರತಿ ಶೆಟ್ಟಿ, ಅಯುಧ್ ಅಧ್ಯಕ್ಷೆ ಮೆಘನಾ ಬಿ ಮತ್ತು ಅಮೃತ ವಿದ್ಯಾಲಯ ನಿರ್ದೇಶಕ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.