ಇತ್ತೀಚಿನ ಸುದ್ದಿ
ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರ: ಯಶ್ ಪಾಲ್ ಸುವರ್ಣ
19/08/2022, 14:29
ಮಂಗಳೂರು(reporterkarnataka.com): ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಪ್ಲೆಕ್ಸ್ ಮಾತ್ರವಲ್ಲ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ ಅಜ್ಜರಕಾಡಿನ ಬ್ರಹ್ಮಗಿರಿಯಲ್ಲಿ ವೀರ ಸಾವರ್ಕರ್ ಬ್ಯಾನರ್ ಅಳವಡಿಸಿ ವಿವಾದ ಉಂಟಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,ಪುತ್ಥಳಿ ನಿರ್ಮಾಣದ ಬಗ್ಗೆ ಕೆಲ ಪುಂಡ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಕಾಂಗ್ರೆಸ್ ನಾಯಕರ ಸಾವರ್ಕರ್ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ.
1970 ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ವೀರ್ ಸರ್ಕಾರ ಅವರ ಭಾವಚಿತ್ರವನ್ನು ಪೋಸ್ಟ್ ಸ್ಟ್ಯಾಂಪ್ ಅನ್ನು ಬಿಡುಗಡೆ ಮಾಡುವ ಮೂಲಕ ದೇಶಕ್ಕೆ ಅವರ ಕೊಡುಗೆ, ವಿಚಾರ ತಿಳಿಸುವ ಕೆಲಸವನ್ನು ಮಾಡಿದ್ದರು ಎಂದ ಯಶ್ನಾಲ್, ಮಾಜಿ ಸಿಎಂ ಸಿದ್ದರಾಮಯ್ಯನವರೇ ನಾನು ನಿಮಗೆ ನೇರವಾಗಿ ಸವಾಲು ಹಾಕುತ್ತಿದ್ದೇನೆ.
ನಿಮಗೆ ತಾಕತ್ತಿದ್ದರೆ ನಿಮ್ಮ ಕಾಂಗ್ರೆಸ್ ಕಛೇರಿಯಲ್ಲಿರುವ ಇಂದಿರಾ ಗಾಂಧಿಯವರ ಭಾವಚಿತ್ರವನ್ನು ತೆಗೆದು ಹಾಕಿ. ಮತ್ತೆ ಈ ಬಗ್ಗೆ ಮಾತನಾಡುವ ನೈತಿಕತೆ ನೀವು ಬನ್ನಿ ಆ ಸಂದರ್ಭದಲ್ಲಿ ನಾವು ನಿಮಗೆ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ.
75 ವರ್ಷದ ಈ ಇಳಿ ವಯಸ್ಸಿನಲ್ಲಿ ಇಂತಹ ಮಾತುಗಳನ್ನು ಆಡುವುದು ಮಾಜಿ ಸಿಎಂ ಆದ ನಿಮಗೆ ಶೋಭೆ ತರುವಂಥದ್ದು ಅಲ್ಲ ಎಂದಿದ್ದಾರೆ.