ಇತ್ತೀಚಿನ ಸುದ್ದಿ
ಮಂಗಳೂರು ಶರಣ ಸಾಹಿತ್ಯ ಪರಿಷತ್ ವತಿಯಿಂದ ಕದಳಿ ಮಹಿಳಾ ವೇದಿಕೆ ಉದ್ಘಾಟನೆ
16/08/2022, 08:56

ಮಂಗಳೂರು(reporterkarnataka.com): ಮಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಕದಳಿ ಮಹಿಳಾ ವೇದಿಕೆ ವತಿಯಿಂದ ಕದಳಿ ಮಹಿಳಾ ವೇದಿಕೆಯ ಉದ್ಘಾಟನಾ ಸಮಾರಂಭ ನಗರದ ಶಾರದಾ ಕಾಲೇಜು ಬಳಿಯಿರುವ ವಾತ್ಸಲ್ಯ ಧಾಮದ ಶತಾಯುಷಿ ದಂಪತಿ ಮಂಟಪದಲ್ಲಿ ಜರುಗಿತು. ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥಪ್ಪ ಪಡಸಾಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಕದಳಿ ಮಹಿಳಾ ವೇದಿಕೆಯು ಕೇವಲ ಮಹಿಳೆಯರಿಗಾಗಿ ಮಾತ್ರ ಇರುವಂತದ್ದು. ಮಹಿಳೆಯು ಕೇವಲ ಮನೆಯ ನಾಲ್ಕು ಗೋಡೆಗೆ ಸೀಮಿತವಾಗಿರದೆ ಚುರುಕುತನದಿಂದ ಎಲ್ಲಾ ವಿಭಾಗಗಳಲ್ಲಿ ತನ್ನನ್ನು ತೊಡಗಿಸಿಕೊಂಡರೆ ಮಾತ್ರ ಆಕೆ ಉನ್ನತಿಯನ್ನು ಕಾಣಲು ಸಾಧ್ಯ. ಆದುದರಿಂದ ಹೆಚ್ಚು ಹೆಚ್ಚು ಮಹಿಳೆಯರು ಕದಳಿ ಮಹಿಳಾ ವೇದಿಕೆಗೆ ಸೇರುವಂತಾಗಬೇಕು. ಇಲ್ಲಿ ಯಾವುದೇ ಜಾತಿ ಧರ್ಮದ ಬೇಧವಿಲ್ಲ. ಮುಕ್ತವಾಗಿ ಎಲ್ಲಾ ಮಹಿಳೆಯರು ಭಾಗವಹಿಸಬಹುದು ಎಂದು ತಿಳಿಸಿದರು.
12ನೇ
ಶತಮಾನದಲ್ಲಿ ಅಕ್ಕಮಹಾದೇವಿ, ನಾಗಮ್ಮ ರಂತವರು ವಚನ ಸಾಹಿತ್ಯವನ್ನು ಬರೆದರು. ಮಹಿಳೆಯು ತನ್ನನ್ನು ತಾನು ತಿಳಿದುಕೊಂಡರೆ ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡಬಹುದು ಎಂದು ಕಿವಿಮಾತು ಹೇಳಿದರು.
ನಿರ್ಮಲಾ ಚಂದ್ರಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಾಯುಷಿ ದಂಪತಿ ಮಂಟಪದ ಮುಖ್ಯಸ್ಥರಾದ ಶ್ರೀನಾಥ್ ಹೆಗ್ಡೆಯವರು ಶರಣ ಸಾಹಿತ್ಯದ ಬಗ್ಗೆ ಒಂದೆರಡು ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಕುಂತಲಾ ಅವರು ಚಿಂತನೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎನ್.ಆರ್. ಕಾಮತ್, ನರಸಿಂಹ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಾತಿ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ದೇವಿ ಸ್ತೋತ್ರ ಹಾಗೂ ಹನುಮಾನ್ ಚಾಲೀಸ್ ಪಠನೆಯನ್ನು ಕಾರ್ಯಕ್ರಮ ನಿರೂಪಕರಾದ ಸುರೇಖಾ ಅವರು ನಡೆಸಿಕೊಟ್ಟರು.