8:33 PM Tuesday13 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ವಿಶ್ವ ಟೇಕ್ವಾಂಡೋ ಕೂಟದಲ್ಲಿ ಬೆಳ್ಳಿ ಗೆದ್ದ ಸಂಹಿತಾಗೆ ಹುಟ್ಟೂರಲ್ಲಿ ಸ್ವಾಗತ, ಅಭಿನಂದನೆ

15/08/2022, 15:26

ಮಂಗಳೂರು(reporterkarnataka.com): ಮಲೇಷ್ಯಾ ಕೌಲಲಾಂಪುರದ ವಿಶ್ವ ಟೇಕ್ವಾಂಡೋ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸಂಹಿತಾ ಅಲೆವೂರಾಯ ಅವರನ್ನು ಸೋಮವಾರ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ನಾಗರಿಕರ ಪರವಾಗಿ ಅಭಿನಂದಿಸಲಾಯಿತು. 

ನೇಪಾಳದಲ್ಲಿ  ನಡೆದ ವಿಶ್ವ ಟೇಕ್ವಾಂಡೋ ಕೂಟದಲ್ಲಿ ಚಿನ್ನ ಗಳಿಸಿದ್ದೆ. ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದೆ. 20 ದೇಶಗಳ 50 ಸ್ಪರ್ಧಿಗಳು ಇದ್ದರು. ತೀವ್ರವಾದ ಸ್ಪರ್ಧೆ ಇತ್ತು, ಬೆಳ್ಳಿ ಪದಕದಿಂದ ಸಂತುಷ್ಟನಾಗಿದ್ದೇನೆ. ಶಾರದಾ ಕಾಲೇಜು, ಕೋಚ್‌ ಗುರುರಾಜ್‌, ನಿಖಿಲ್‌, ಕೃಷ್ಣ ಮತ್ತು ತಂದೆ ತಾಯಿಯ ಪ್ರೋತ್ಸಾಹದಿಂದ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಸಂಹಿತಾ ಅಲೆವೂರಾಯ ಹೇಳಿದರು. 


ಶಿವಳ್ಳಿ ಸ್ಪಂದನ ಅಧ್ಯಕ್ಷ ಕೆ.ಕೃಷ್ಣ ಭಟ್‌, ವಲಯಾಧ್ಯಕ್ಷ ರಾಮಚಂದ್ರ ಭಟ್‌ ಎಲ್ಲೂರು ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಧಾರ್ಮಿಕ ಪರಿಷತ್‌ ಸದಸ್ಯ ಗಿರಿಪ್ರಕಾಶ್‌ ತಂತ್ರಿ ಅಭಿನಂದಿಸಿದರು. ಹೆತ್ತವರಾದ ಕುಂಜತ್ತೋಡಿ ವಾಸುದೇವ ಭಟ್‌ ಮತ್ತು ದೀಪಾ ಕೆ.ಎಸ್.‌ ಮತ್ತು ಋತ್ವಿಕ್‌ ಅಲೆವೂರಾಯ ಇದ್ದರು. 

ಕಾಲೇಜಿನಲ್ಲಿ ಅಭಿನಂದನೆ: ಶಾರದಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿಸಲಾಯಿತು. ಶಾರದಾ ಕಾಲೇಜಿನ ಮುಖ್ಯಸ್ಥ ಎಂ.ಬಿ.ಪುರಾಣಿಕ್‌, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್‌ ಇದ್ದರು.

ಬಳಿಕ ಕದ್ರಿ ಬಡಾವಣೆಯಲ್ಲಿ ಮಹಿಳಾ ಬಳಗದವರು ಸ್ವಾಗತಿಸಿ, ಪದಕ ಗೆದ್ದು ಊರಿಗೆ ಖ್ಯಾತಿ ತಂದ ಸಂಹಿತಾ ಅಲೆವುರಾಯ ಅವರಿಗೆ ಅಭಿನಂದಿಸಿ, ಜೈಕಾರ ಕೂಗಿದರು. 

ಇತ್ತೀಚಿನ ಸುದ್ದಿ

ಜಾಹೀರಾತು