8:34 PM Monday23 - December 2024
ಬ್ರೇಕಿಂಗ್ ನ್ಯೂಸ್
ಸರಕಾರ ರೈತರ ಪರವಾಗಿದೆ: ಚನ್ನರಾಯಪಟ್ಟಣ ರೈತ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್…

ಇತ್ತೀಚಿನ ಸುದ್ದಿ

ರಕ್ತದಾನವೆಂದರೆ ಜೀವದಾನದ ಸಂಭ್ರಮ: ಲಯನ್ಸ್  ಪ್ರಾಂತೀಯ ಅಧ್ಯಕ್ಷ ಲೋಕೇಶ್ ಶೆಟ್ಟಿ ಅಭಿಮತ

08/08/2022, 21:59

ಮಂಗಳೂರು(reporterkarnataka.com): ಮಾನವ ದೇಹದ ಜೀವಸೆಲೆಯಾದ ರಕ್ತವನ್ನು ದಾನವಾಗಿ ನೀಡುವುದು ಇನ್ನೊಂದು ಜೀವವನ್ನುಳಿಸುವ ಮಹತ್ಕಾರ್ಯವಾಗಿದೆ. ಮನುಷ್ಯ ಯಾವುದನ್ನು ಬೇಕಾದರೂ ಕೃತಕವಾಗಿ ಸೃಷ್ಟಿ ಮಾಡಬಲ್ಲ. ಆದರೆ ರಕ್ತ ಸಾಧ್ಯವಿಲ್ಲ

ಎಂದು ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 10 ಇದರ ಪ್ರಾಂತೀಯ ಅಧ್ಯಕ್ಷ ಲಯನ್ ಲೋಕೇಶ್ ಶೆಟ್ಟಿ ಹೇಳಿದರು.

ಅವರು ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಯೂತ್ ರೆಡ್ ಕ್ರಾಸ್ ಘಟಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್‌ ಕದ್ರಿ ಹಿಲ್ಸ್ – ಇವುಗಳ ಸಹಯೋದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯ ಯಾವುದೂ ಇಲ್ಲ.ಆದ್ದರಿಂದ ರಕ್ತದಾನವೆಂದರೆ ಜೀವದಾನದ ಸಂಭ್ರಮ. ಅದರ ಮಹತ್ವ ವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಳಾಗಿದ್ದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ.ಜೆ.ಎನ್.ಭಟ್ ಮಾತನಾಡಿ “ಜ್ಞಾನದಾನ, ಅನ್ನದಾನಕ್ಕಿಂತಲೂ ಶ್ರೇಷ್ಠವಾದದ್ದು ರಕ್ತದಾನ. ಜ್ಞಾನದಾನವನ್ನು ಪಡೆದ ವ್ಯಕ್ತಿ ಒಂದು ಹಂತದಲ್ಲಿ ಕಿಡಿಗೇಡಿಯಾಗಬಹುದು; ಅನ್ನದಾನವನ್ನು ಪಡೆದ ವ್ಯಕ್ತಿಗೆ ಮತ್ತೆ ಹಸಿವಾಗಬಹುದು; ಆದರೆ ರಕ್ತ ದೇವರು ನಮಗೆ ಕೊಟ್ಟ ಬಹಳ ದೊಡ್ಡ ಕೊಡುಗೆ. ಆದ್ದರಿಂದ ರಕ್ತದಾನದ ಮೂಲಕ ಜೀವವನ್ನುಳಿಸುವ ಸೇವೆಯನ್ನು ಮಾಡಿದಲ್ಲಿ ಆ ಭಗವಂತ ನಮಗೆ ಕೊಟ್ಟ ಬದುಕಿಗೆ ಕೃತಜ್ಞತೆ ಸಲ್ಲಿಸಿದಂತೆ ಎಂದರು.

ಇನ್ನೊಬ್ಬ ಮುಖ್ಯ ಅತಿಥಿ ಲಯನ್ಸ್ ಇಂಟರ್ ನ್ಯಾಶನಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಲಯನ್ ಪ್ರವೀಣ್ ಶೆಟ್ಟಿ ಮಾತನಾಡಿ, “ಉಪಗ್ರಹ, ರಾಕಟ್ ಇತ್ಯಾದಿ ಗಳನ್ನು ಸೃಷ್ಟಿಸಬಹುದು:ಆದರೆ ಒಂದು ಹನಿ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ರಕ್ತದಾನ ಅನ್ನುವುದು ಸಹೋದರತ್ವವನ್ನು ಬೆಸೆಯುವ ಕಾರ್ಯ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಭವ್ಯ ಭಾರತದ ನಿರ್ಮಾಣ ಸಾಧ್ಯ” ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಕಾಲೇಜಿನ ಸಂಚಾಲಕ ಸಿಎ ಜಗನ್ನಾಥ ಕಾಮತ್ ಅವರು ಅಧ್ಯಕ್ಷೀಯ ನುಡಿಗಳಾನ್ನಾಡುತ್ತಾ “ರಕ್ತವು ಹರಿಯುತ್ತಾ ಇರಬೇಕು. ಹರಿಯುತ್ತಾ ಇರಬೇಕಾದರೆ ಕೊಡುತ್ತಾ ಇರಬೇಕು. ಆದ್ದರಿಂದ ವಿದ್ಯಾರ್ಥಿಗಳು ರಕ್ತದಾನದ ಮಹತ್ವವನ್ನರಿತು ರಕ್ತದಾನ ಮಾಡಿದಲ್ಲಿ ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸಲು ಸಾಧ್ಯ” ಎಂದು ಹೇಳಿದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ವಾಣಿ ಯು.ಎಸ್.,ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ದ ಯೋಜನಾಧಿಕಾರಿಗಳಾದ ಸ್ಮಿತಾ ಎಂ., ರೂಪಶ್ರೀ  ಕೆ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ದೇಜಮ್ಮ ಎ. ಸ್ವಾಗತಿಸಿ, ಕದ್ರಿ ಹಿಲ್ಸ್ ನ ಲಯನ್ಸ್ ಮತ್ತು ಲಿಯೋ ಕ್ಲಬ್ ನ ಅಧ್ಯಕ್ಷೆ ಲಯನ್ ಸುಮಿತ್ರಾ ಶೆಟ್ಟಿ ವಂದಿಸಿದರು .ರಾ.ಸೇ.ಯೋ.ಸ್ವಯಂಸೇವಕ ಪರಶುರಾಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು