ಇತ್ತೀಚಿನ ಸುದ್ದಿ
ಮಡಿಕೇರಿ: ಭಾರಿ ಮಳೆಯ ಹಿನ್ನೆಲೆಯಲ್ಲಿ 2ನೇ ಮೊಣ್ಣಂಗೇರಿ, ರಾಮಕೊಲ್ಲಿಯ ಹಲವು ಕುಟುಂಬಗಳ ಸ್ಥಳಾಂತರ
08/08/2022, 12:01

ಸಾಂದರ್ಭಿಕ ಚಿತ್ರ
ಮಡಿಕೇರಿ(reporterkarnataka.com): ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಅಪಾಯದಲ್ಲಿರುವ ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.
2ನೇ ಮೊಣ್ಣಂಗೇರಿ, ರಾಮಕೊಲ್ಲಿಯ 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ ಮಾಡಲಾಗಿದ್ದು,ಮಡಿಕೇರಿ ರೆಡ್ ಕ್ರಾಸ್ ಸೊಸೈಟಿಯ ಕಾಳಜಿ ಕೇಂದ್ರದಲ್ಲಿ 70 ಕ್ಕೂ ಹೆಚ್ಚು ಸಂತ್ರಸ್ತರಿಗೆ ಆಶ್ರಯ ಪಡೆದಿದ್ದಾರೆ.