ಇತ್ತೀಚಿನ ಸುದ್ದಿ
ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು: ಶೂ ಧರಿಸಿ ಗಜಪಡೆಗೆ ಪೂಜೆ ಸಲ್ಲಿಕೆ!; ಸಾರ್ವಜನಿಕರಿಂದ ಆಕ್ಷೇಪ
07/08/2022, 16:50
ಮೈಸೂರು(reporterkarnataka.com): ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಇಂದು ದಸರಾ ಗಜಪಡೆ ಪೂಜೆ ಸಲ್ಲಿಸುವ ವೇಳೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಶೂ ಧರಿಸಿದ್ದರೆಂಬ ಆಕ್ಷೇಪ ವ್ಯಕ್ತವಾಗಿದೆ.
ಪೂಜಾ ಕಾರ್ಯಕ್ರಮದ ವೇಳೆ ಇತರ ಗಣ್ಯರು ಬರಿಗಾಲಲ್ಲಿ ಪೂಜೆ ಸಲ್ಲಿಸಿದರೆ, ಉಮೇಶ್ ಕತ್ತಿ ಮಾತ್ರ ಶೂ ಧರಿಸಿದ್ದರು. ಸಂಪ್ರದಾಯವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ, ಶೂ ಧರಿಸುವುದಿಲ್ಲ.ಆದರೆ ಉಮೇಶ್ ಕತ್ತಿ ಎಲ್ಲವನ್ನೂ ಗಾಳಿಗೆ ತೂರಿ ಶೂ ಧರಿಸಿ ಪೂಜೆ ಸಲ್ಲಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.