ಇತ್ತೀಚಿನ ಸುದ್ದಿ
ಅನ್ನಭಾಗ್ಯದ ಅಕ್ಕಿ ಅನ್ಯರ ಪಾಲು!: ಬಡವರ ಕೂಳಿಗೂ ಆಗಾಗ ಕನ್ನ: 2050 ಕೆಜಿ ಅಕ್ರಮ ಪಡಿತರ ವಶ
05/08/2022, 20:32
ಕುಂದಾಪುರ(reporterkarnataka.com): ಬಡವರಿಗೆ ಸರಕಾರ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ಆಗಾಗ ಅಕ್ರಮ ಸಾಗಾಟ ಮಾಡಿದ ವಿಷಯವನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದೀಗ ಕುಂದಾಪುರ ತಾಲೂಕಿನಲ್ಲಿ ಇಂತಹದ್ದೊಂದು ಅಕ್ರಮ ದಾಸ್ತಾನು ಬೆಳಕಿಗೆ ಬಂದಿದೆ. ಇಲ್ಲಿನ ತಲ್ಲೂರು ನೇರಳಕಟ್ಟೆಯ ಮನೆಯೊಂದಕ್ಕೆ ಕುಂದಾಪುರ ಆಹಾರ ನಿರೀಕ್ಷಕರು ಪೊಲೀಸರೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 45100 ರೂ. ಮೌಲ್ಯದ 2050 ಕೆ.ಜಿ ತೂಕದ ಉಚಿತ ಅನ್ನ ಭಾಗ್ಯ ಯೋಜನೆ ಅಕ್ಕಿಯನ್ನು ವಶಪಡಿಸಿಕೊಂಡಿಸಿದ್ದಾರೆ.
ತಲ್ಲೂರು ನೇರಳಕಟ್ಟೆಯ ನಿವಾಸಿ ಅಬ್ದುಲ್ ಮುನಾಫ್ ಎಂಬಾತ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ದಾಸ್ತಾನು ಇರಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಹಾಗೂ ಪೊಲೀಸರು ಆ.4ರಂದು ದಾಳಿ ನಡೆಸಿದ್ದಾರೆ.
ಆರೋಪಿ ಅಬ್ದುಲ್ ಮುನಾಫ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ಸರಕಾರದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿಯನ್ನು ಯಾರಿಂದಲೋ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಈ ಸಂದರ್ಭದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 45100 ರೂ. ಮೌಲ್ಯದ 2050 ಕೆ.ಜಿ ತೂಕದ ಉಚಿತ ಅನ್ನ ಭಾಗ್ಯ ಯೋಜನೆ ಅಕ್ಕಿ ಹಾಗೂ 80 ಮೌಲ್ಯದ ಆಟೋ ರಿಕ್ಷಾ, 3 ಸಾವಿರ ಮೌಲ್ಯದ ತೂಕದ ಯಂತ್ರ, 300 ರೂ. ಗೋಣಿ ಚೀಲ, 150 ರೂ. ಪ್ಲಾಸ್ಟಿಕ್ ಚೀಲ ಮೊದಲಾದ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.