ಇತ್ತೀಚಿನ ಸುದ್ದಿ
ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪ: ಸೆನ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಕೇಸ್ ದಾಖಲು
05/08/2022, 11:22
ಬೈಂದೂರು(reporterkarnataka.com):ಮಂಗಳೂರು ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬೈಂದೂರಿನ ವ್ಯಕ್ತಿಯೋರ್ವರ ಮೇಲೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್ ಬುಕ್ ಖಾತೆದಾರನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್ ಬುಕ್ ಖಾತೆದಾರ ಆತನ ಫೇಸ್ ಬುಕ್ ಖಾತೆಯಲ್ಲಿ ಮಂಗಳೂರಿನಲ್ಲಿ ಕೊಲೆಯಾಗಿ ಮೃತಪಟ್ಟಿರುವ ಪ್ರವೀಣ್ ಎಂಬಾತನ ಫೋಟೋವನ್ನು ಬಳಸಿ ಒಂದು ಕೊಲೆಗೆ ಪ್ರತಿಕಾರ ಹೇಗಿತ್ತು ಎಂಬುದಾಗಿ ಪ್ರಚೋದನಾಕಾರಿ ಬರಹವನ್ನು ಬರೆದು ಪೋಸ್ಟ್ ಮಾಡಿರುವುದು ಹಾಗೂ ದಿನಪತ್ರಿಕೆಯಲ್ಲಿ ಬಂದಿರುವ ಮಂಗಳೂರಿನಲ್ಲಿ ನಡೆದ ಫಾಜಿಲ್ ಹತ್ಯೆಯ ಆರೋಪಿಗಳ ಫೋಟೋವನ್ನು ಬಳಸಿ, “ ಇವತ್ತಿನ ಹೀರೋಗಳು ” ಎಂಬ ಬರಹವನ್ನು ಬರೆದು ಪೋಸ್ಟ್ ಮಾಡಿದ್ದು, ಈ ರೀತಿಯಾಗಿ ಸುಳ್ಳು, ಪ್ರಚೋದನಾಕಾರಿ ಹಾಗೂ ಕೋಮು ಪ್ರಚೋದನೆ ಪೋಸ್ಟ್ ನ್ನು ಹರಿಯಬಿಟ್ಟಿರುವುದು ಕಂಡುಬಂದಿದ್ದು ಈತನ ವಿರುದ್ದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಅನ್ವಯ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.