ಇತ್ತೀಚಿನ ಸುದ್ದಿ
ಅಧಿಕಾರಗಳ ಬೇಜವಾಬ್ದಾರಿ: ಕಡೂರು ನಿಡುವಳ್ಳಿಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು; ಬಡವರ ದವಸ ಧಾನ್ಯಕ್ಕೆ ಹಾನಿ
05/08/2022, 10:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಭಾರಿ ಮಳೆಯಿಂದ ಜಿಲ್ಲೆಯ ಕಡೂರು ತಾಲೂಕಿನ ನಿಡುವಳ್ಳಿ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿ ಭಾರೀ ನಷ್ಟ ಉಂಟಾಗಿದೆ.
ದಿಢೀರ್ ಮಳೆಯಿಂದಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಹಾನಿಗೀಡಾಗಿವೆ. ಮಳೆಯಿಂದ ರಾತ್ರಿಯಿಡೀ ಜನರ ಪರದಾಡ ಬೇಕಾಯಿತು.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ನೀರು ನುಗ್ಗಿದೆ.
ಕೊನೆಗೆ ನೀರು ಹೊರಹಾಕಲು ಮುಖ್ಯರಸ್ತೆಯನ್ನೇ ಜನರು ಅಗೆಯಬೇಕಾಯಿತು. ಅಧಿಕಾರಿಗಳ ಸೂಚನೆ ಮೇರೆಗೆ ಮುಖ್ಯರಸ್ತೆಯನ್ನೇ ಜನರು ತುಂಡರಿಸಿದರು.