ಇತ್ತೀಚಿನ ಸುದ್ದಿ
ಅಥಣಿ ಕೊಕಟನೂರ ಬಳಿ ಹಳ್ಳಕ್ಕೆ ಉರುಳಿ ಬಿದ್ದ ಸರಕಾರಿ ಬಸ್: ಹಲವರಿಗೆ ಸಣ್ಣಪುಟ್ಟ ಗಾಯ
04/08/2022, 16:04
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಬ್ರೇಕ್ ಹಾಳಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್ ಒಂದು ಹಳ್ಳದ ದಂಡೆಗೆ ಉರುಳಿಬಿದ್ದ ಘಟನೆ ನಡೆದಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸುಮಾರು 25 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಅಥಣಿ ಘಟಕದ ಸರ್ಕಾರಿ ಬಸ್ ಬ್ರೇಕ್ ಹಾಳಾದ ಹಿನ್ನಲೆಯಲ್ಲಿ ಕೊಕಟನೂರ ಹಳ್ಳದ ಪಕ್ಕ ಬಿದ್ದಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆ ದಾಖಲಿಸಿದಲಾಗಿದೆ.
ಅದೃಷ್ಟವಶಾತ್ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಯಪಾಯ ಸಂಭವಿಸಿಲ್ಲ, ಮೇ ಲೈನ ವಿದ್ಯುತ್ ಕಂಬದಿಂದ ಪ್ರಯಾಣಿಕರ ಪ್ರಾಣ ಉಳಿದಿದೆ.