11:14 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ನಾಗರ ಚೌತಿ ಪ್ರಯುಕ್ತ ಮನೆ ಮನೆಗಳಲ್ಲಿ, ದೇಗುಲಗಳಲ್ಲಿ ನಾಗರ ಮೂರ್ತಿಗೆ ಹಾಲೆರೆದ ಭಕ್ತರ ದಂಡು

01/08/2022, 20:30

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಾಗರ ಚೌತಿ  ಪ್ರಯುಕ್ತ ನಾಗರ ಮೂರ್ತಿಗೆ ಆಸ್ತಿಕರು ಹಾಲೆರೆಯೋ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. 

ಪಟ್ಟಣದ ಶ್ರೀಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ನಾಗದೇವತೆಯ ಮೂರ್ತಿಗೆ ಭಕ್ತರು ಹಾಲೆರದು ಭಕ್ತಿ ಮೆರೆದರು. ಹಲವರು ತಮ್ಮ ಮನೆಯ ದೇವರ ಜಗುಲಿಯಲ್ಲಿ ನಾಗರ ದೇವರ ಮೂರ್ತಿ ಪ್ರತಿಷ್ಠಾಪಿಸಿ, ನಾಗರ ಮೂರ್ತಿಗೆ ಭಕ್ತಿಯಿಂದ ಹಾಲೆರು ಹಬ್ಬ ಆಚರಿಸಿದರು. ಕೆಲವರು ನಾಗರ ಚೌತಿಯಂದು ಹಾಲೆರದು ಹಬ್ಬ ಆಚರಿಸಿದೆರೆ ಉಳಿದವರು ನಾಗ ಪಂಚಮಿಯಂದು ಹಾಲೆರೆದು ಹಬ್ಬ ಆಚರಿಸುತ್ತಾರೆ. ಕುಟುಂಬ ಸಮೇತರಾಗಿ ಬಂಧು ಬಳಗದೊಂದಿಗೆ ಸಾಮೂಹಿಕವಾಗಿ ಹಾಲೆರೆಯೋ ಸಾಂಪ್ರದಾಯ, ಅವಿಭಕ್ತ ಕುಟುಂಬದಲ್ಲಿ ಈಗಲೂ ಕಾಣಬಹುದಾಗಿದೆ. ಅವಿಭಕ್ತ ಕುಟುಂಬ ಕಾಣೆಯಾಗೋ ಸಂದರ್ಭದಲ್ಲಿ, ವಿಭಕ್ತ ಕುಟುಂಬದ ಸದಸ್ಯರು ಮನೆಯಲ್ಲಿಯೆರ ನಾಗದೇವರ ಆರಾಧನೆ ಮಾಡೋದು ಇತ್ತೀಚೆಗೆ ಸಮಾನ್ಯವಾಗಿದೆ. ನಾಗರ ಪಂಚಮಿ ಪ್ರಯುಕ್ತ ಪಟ್ಟಣ ಸೇರಿದಂತೆ ,ತಾಲೂಕಿನೆಲ್ಲೆಡೆ ನಾಗ ದೇವರಾಧನೆ ಜರುಗಿದೆ. ಮಕ್ಕಳು, ಯುವಕ ಯುವತಿಯರು, ಮಹಿಳೆಯರು, ನಾಗರ ಪಂಚಮಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು. ಅಂತೆಯೇ ಪಟ್ಟಣದ ಶ್ರೀಬಸವ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಗ ಪ್ರತಿಮೆಗೆ, ಹಾಗೂ ತಮ್ಮ ಮನೆಯ ದೇವರ ಜಗುಲಿಯಲ್ಲಿರುವ ನಾಗ ಪ್ರತಿಮೆಗೆ. ಪುಟಾಣಿ ಅರಣಿ ತನ್ನ ತಾಯಿ ರೇಣುಕಾ ಹಾಗೂ ಸಹೋದರ ವಿನಾಯಕನೊಂದಿಗೆ ನಾಗದೆವತೆಗೆ ಶಾಸ್ತ್ರೋಕ್ತವಾಗಿ ಪೂಜೆಗೈದು ಶ್ರದ್ಧಾ ಭಕ್ತಿಯಿಂದ ಹಾಲೆರದು, ತಮ್ಮ  ಭಕ್ತಿ ಸಮರ್ಪಿಸಿ ಹಬ್ಬಕ್ಕೆ ಮತ್ತಷ್ಟು ಮೆರೆಗುತಂದಿದ್ದಾಳೆ. 

ಇತ್ತೀಚಿನ ಸುದ್ದಿ

ಜಾಹೀರಾತು