ಇತ್ತೀಚಿನ ಸುದ್ದಿ
ಕೊಪ್ಪ: ತೋಟಕ್ಕೆ ನುಗ್ಗಿದ ಆನೆ; ಬಾಳೆ, ಅಡಿಕೆ ಸೇರಿ ಅಪಾರ ಪ್ರಮಾಣದ ಕೃಷಿ ಹಾನಿ
01/08/2022, 16:59
ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊನ್ನಗುಂಡಿಯಲ್ಲಿ ಸೋಮವಾರ ಮುಂಜಾನೆ ತೋಟವೊಂದಕ್ಕೆ ನುಗ್ಗಿದ ಆನೆ ಅಪಾರ ಪ್ರಮಾಣದ ಕೃಷಿ ಹಾನಿಗೊಳಿಸಿದೆ.
ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಗುಂಡಿ (ಬಸರೀಕಟ್ಟೆ ಸಮೀಪ) ಯಲ್ಲಿ ಭಾನುವಾರ ತಡರಾತ್ರಿ ಹಾಗೂ ಸೋಮವಾರ ನಸುಕಿನ ವೇಳೆ ಶೀನ ಶೆಟ್ಟಿ ಎಂಬುವವರ ತೋಟಕ್ಕೆ ಆನೆ ನುಗ್ಗಿ ಬಾಳೆ, ಅಡಿಕೆ ಸಸಿ ಮತ್ತು ಕಾಫಿಗಿಡಗಳು ಹಾನಿಯಾಗಿದೆ.