4:21 AM Monday29 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ: ಖಾಸಗಿ ಶಾಲೆಗಳ ಫೀಸ್ ಮಾಫಿಯಾಕ್ಕೆ ಕುಮ್ಮಕ್ಕು?

22/06/2021, 17:57

ರಾಜೀವಿಸುತ ಬೆಂಗಳೂರು

info.reporterkarnataka@gmail.com

ಮಾನ್ಯ ಶಿಕ್ಷಣ ಸಚಿವರೇ, ನಿಮ್ಮ ಮೇಲೆ‌ ಇರುವ ಗೌರವದಿಂದಲೇ ಈ ಮಾತುಗಳನ್ನು ಬರೆಯುತ್ತಿದ್ದೇನೆ. 

ಕಳೆದ ಎರಡು ವರ್ಷಗಳಿಂದ ಸಂಬಳವನ್ನೇ ಪಡೆಯದೆ ಅಥವಾ 3-4 ಸಾವಿರ ರೂಗಳ ಅರ್ಧ ಸಂಬಳ ತೆಗದುಕೊಳ್ಳುತ್ತಿರುವ ಶಿಕ್ಷಕರು ಒಂದು ಕಡೆಯಾದರೆ , ಇನ್ನೊಂದು ಕಡೆ ಫೀಸ್ ಕಟ್ಟಲು ಪರದಾಡುತ್ತಿರುವ ಪೋಷಕರು ನಿಮ್ಮ ಕಣ್ಣ ಎದುರೇ ಇದ್ದಾರೆ. ಇಬ್ಬರಿಗೂ ಆ ನಿಮ್ಮ‌ ‘ಅಡ್ಡಗೋಡೆಯ ಮೇಲಿನ ದೀಪದ’ ಮಾತುಗಳು‌ ಪರಿಹಾರ ಅಥವಾ ಭವಿಷ್ಯದ ಭಯವನ್ನು ಹೋಗಲಾಡಿಸಲಾರವು.  ಸದ್ಯದ ಪರಿಸ್ಥಿತಿಯನ್ನು ನೀವು  ಈ “ಅಸಹಾಯಕತೆಯ ದೃಷ್ಟಿ”ಯಲ್ಲಿ ನೋಡುವ ಬಗೆಯೇ ನಿಜಕ್ಕೂ‌ ದುರಂತ. ನಿಮ್ಮ ಈ ಸೌಜನ್ಯದ ಮಾತುಗಳು ಹೆಚ್ಚು ಖಾಸಗಿ ಶಾಲೆಗಳ‌ ಕಡೆಗೆ ವಾಲಿರುವಂತೆ ಕಾಣಿಸುತ್ತಿವೆ. ಅಧಿಕಾರದಲ್ಲಿರುವವರು ಅಸಹಾಯಕತೆಯ ಮಾತುಗಳನ್ನಾಡಿದರೆ ಸಾಮಾನ್ಯ ಜನರು ಕಂಗಾಲಾಗುತ್ತಾರೆ. ಜೊತೆಗೆ ಖಾಸಗಿ ಶಾಲೆಗಳ‌ ಫೀಸ್ ಮಾಫಿಯಾಗೆ ಸರ್ಕಾರವೇ ಕುಮ್ಮಕ್ಕು ನೀಡಿದಂತಾಗುತ್ತದೆ.

ಇನ್ನು ನಿಮ್ಮ ಇಡೀ ಬರಹದಲ್ಲಿ ನೀವು ಶುಲ್ಕದ‌ ಬಗ್ಗೆ ಮಾತನಾಡುವಾಗ “ಆರ್ಥಿಕವಾಗಿ ತುಂಬಾ ತೊಂದರೆ ಇರುವವರಿಗೆ ನಮ್ಮ ಸರ್ಕಾರಿ ಶಾಲೆಗಳಿವೆ, ನಾನು ನಿಮಗೆ ಅತ್ಯುತ್ತಮ ಶಿಕ್ಷಣದ ಭರವಸೆ ಕೊಡುವೆ” ಎಂದು ಹೇಳಲೇ ಇಲ್ಲ ಎಂಬುದು ಮತ್ತೂ ಖೇದದ ವಿಷಯ. ಸರ್ಕಾರಿ ಶಾಲೆಗಳ ಮೇಲೆ ಸ್ವತಃ ನಿಮಗೇ ನಂಬಿಕೆ ಇಲ್ಲವೇ?. 

ಈಗಲಾದರೂ ಸರಕಾರಿ ಶಾಲೆಯಲ್ಲಿ ಬರೀ ಬಿಸಿಯೂಟ, ಉಚಿತ ಸೈಕಲ್, ಹಾಲು ಮೊಟ್ಟೆ , ಯೂನಿಫಾರಂ , ಶೂ ಮಾತ್ರವಲ್ಲದೇ ಸ್ವಲ್ಪ ಗುಣಮಟ್ಟದ ಶಿಕ್ಷಣವನ್ನು ಕೊಡುವತ್ತ ಗಮನಹರಿಸಿ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ‌ ಕೊಡುವ ವಾತಾವರಣ ನಿರ್ಮಿಸಿ.‌ ಎಲ್ಲೆಲ್ಲಿಯೋ ಕೋಟಿಗಟ್ಟಲೆ ಹಣವನ್ನು ವ್ಯರ್ಥ ಮಾಡುವ ಸರ್ಕಾರ , ಕನಿಷ್ಟ ಸರ್ಕಾರಿ‌ ಶಾಲೆಗಳ ಕಟ್ಟಡಗಳನ್ನು ಉದ್ದದ ರೈಲ್ವೆಬೋಗಿಯಂತೆ‌ ಇರುವ ತರಗತಿಗಳನ್ನು ಸುಂದರವಾಗಿ ಅಚ್ಚುಕಟ್ಟಾಗಿ ಕಾಣುವಂತೆ ನಿರ್ಮಾಣ ಮಾಡುವತ್ತ ಗಮನಹರಿಸಲಿ. ಆಗ ಪೋಷಕರೇ ಸರ್ಕಾರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ.

ಇನ್ನಾದರೂ ದ್ವಂದ್ವ ನಿಲುವುಗಳನ್ನು ತೆಗೆದುಕೊಳ್ಳದೆ ನಿಮ್ಮ ನಿಲುವುಗಳು ಸೃಷ್ಟವಾಗಿರಲಿ. “ಹಾವು ಸಾಯಬಾರದು ಕೋಲು ಮುರಿಯಬಾರದು” ಎಂಬ ನೀತಿ ಬಹಳ ದಿನ ಫಲ‌ ನೀಡದು ಮತ್ತು ತಮ್ಮಂಥ ಸಜ್ಜನರಿಗೆ ಅದು ಶೋಭೆಯೂ ಅಲ್ಲ.

(ಇದು ನೊಂದ ಸಾರ್ವಜನಿಕರೊಬ್ಬರು ರಿಪೋರ್ಟರ್ ಕರ್ನಾಟಕಕ್ಕೆ ಬರೆದ ಪತ್ರ)

ಇತ್ತೀಚಿನ ಸುದ್ದಿ

ಜಾಹೀರಾತು