8:39 AM Monday16 - February 2026
ಬ್ರೇಕಿಂಗ್ ನ್ಯೂಸ್
ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ…

ಇತ್ತೀಚಿನ ಸುದ್ದಿ

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: ಕಾರು ಚಾಲಕ ಪೊಲೀಸ್ ವಶಕ್ಕೆ; ತನಿಖೆ ಇನ್ನಷ್ಟು ಚುರುಕು

31/07/2022, 17:26

ಮಂಗಳೂರು(reporterkarnataka.com): ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ತನಿಖೆಯಲ್ಲಿ ಹಲವು ಪ್ರಗತಿ ಕಂಡಿದ್ದು ಪ್ರಮುಖ ಸಾಕ್ಷ್ಯಾಧಾರಗಳು ದೊರೆತಿದೆ. ಇದಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ‘ಫಾಝಿಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ವಿಚಾರಣೆ ಶಾಂತಿ ರೀತಿಯಲ್ಲಿ ಮುಗಿದಿದೆ. ತನಿಖೆಗೆ ಲೀಡ್ ಆಗುವಂತಹ ಸಾಕಷ್ಟು ವ್ಯಕ್ತಿಗಳನ್ನು ನಾವು ವಿಚಾರಣೆಗೆ ಒಳಪಡಿಸಿದ್ದೇವೆ.

ಪ್ರಾರಂಭದಲ್ಲಿ 14 ಜನ ನಂತರದಲ್ಲಿ 21 ಅನಂತರದಲ್ಲಿ ಸುಮಾರು 16 ಜನ, ಒಟ್ಟು 51ಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದೆವು. ಕಾರು ಮಾಲೀಕನನ್ನು ವಿಚಾರಣೆ ಮಾಡಿದ್ದೇವೆ. ಆತ ವಿಚಾರಣೆಯಲ್ಲಿ ಕೆಲವೊಂದು ಮಾಹಿತಿಯನ್ನು ಬಹಿರಂಗ ಮಾಡಿದ್ದಾನೆ. ಇವನಿಂದ ಯಾರು ಕಾರು ತೆಗೆದುಕೊಂಡು ಹೋದರು. ಎಷ್ಟು ಹಣ ಕೊಡ್ತವೆ ಅಂತ ಹೇಳಿದರು ಎನ್ನುವಂತಹ ಎಲ್ಲ ಮಾಹಿತಿಯನ್ನು ಹೇಳಿದ್ದಾನೆ. ಈಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವನನ್ನು ನಂತರ ನಾವು ವಶಕ್ಕೆ ಪಡೆಯಲಿದ್ದೇವೆ. ನಂತರ ಹೆಚ್ಚಿನ ಪ್ರಶ್ನೆಗಳನ್ನು ಅವನಿಗೆ ಮತ್ತೆ ಕೂಡಾ ಕೇಳಲಾಗುತ್ತದೆ ಎಂದು ಪೊಲೀಸ್ ಕಮೀಷನರ್ ನುಡಿದರು.

ಪ್ರಕರಣದ ಆರೋಪಿಗಳ ಬಗ್ಗೆ ಒಂದು ನಿರ್ದಿಷ್ಟ ಮಾಹಿತಿ ಸಿಗುತ್ತೆ. ಈಗಾಗಲೇ ಆತನ ಕೊಟ್ಟ ಮಾಹಿತಿಯಂತೆ ತನಿಖೆ ನಡೆಸಲು ನಮ್ಮ ತನಿಖಾ ತಂಡಗಳು ಮುಂದೆ ಹೋಗಿದೆ.

ಆರೋಪಿಗಳಲ್ಲಿ ಒಬ್ಬ ಆರೋಪಿ ಈತನಿಗೆ ಆಪ್ತ ಸ್ನೇಹಿತ. ಇದಕ್ಕೂ ಮೊದಲು ಕೂಡಾ ಆತ ಈತನಿಂದ ಕಾರು ಪಡೆದುಕೊಳ್ಳುತ್ತಿದ್ದ. ಈತನಲ್ಲಿ ಲಾರಿ, ಕಾರು ಎಲ್ಲ ಇದೆ. ಬೇಕು ಅಂದಾಗ ಹೀಗೆ ಬಾಡಿಗೆ ಕೊಡುತ್ತಿದ್ದ. ಅವನ ಸಂಪೂರ್ಣ ವಿಚಾರಣೆ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ದೃಢಪಡಿಸಿದ್ದಾರೆ.ಇನ್ನೂ ಆಗೋಕು. ನಮ್ಮ ಹಿರಿಯ ಅಧಿಕಾರಿಗಳು ಅವನನ್ನು ಪ್ರಶ್ನಿಸಿದ್ದಾರೆ. ಇನ್ನು ನಾನು ಕೂಡಾ ಆತನನ್ನು ವಿಚಾರಣೆ ಮಾಡಲಿದ್ದೇನೆ. ಕಾರು ಇನ್ನೂ ವಶಕ್ಕೆ ಸಿಕ್ಕಿಲ್ಲ. ಸಿಸಿಟಿವಿ ಫೂಟೇಜ್‌ನಲ್ಲಿ ಕಾರು ನಂಬರ್ ತುಂಬಾ ಕ್ಲಿಯರ್ ಆಗಿ ಕಾಣೋದಿಲ್ಲ.

ಹಾಗಾಗಿ ಬಣ್ಣ ಮತ್ತು ಆ ಬ್ರಾಂಡ್ ಎಷ್ಟು ವರ್ಷದಿಂದ ಚಾಲ್ತಿಯಲ್ಲಿದೆ. ಮತ್ತು ಯಾವ ಕಡೆಗಳಲ್ಲಿ ಅದು ಎಲ್ಲಿಗೆಲ್ಲ ಸೇಲ್ ಆಗಿದೆ ಅನ್ನುವ ಮಾಹಿತಿಯನ್ನು ನಾವು 2-3 ದಿನದಿಂದ ಕಲೆ ಹಾಕುತ್ತಿದ್ದೇವೆ. ಒಂದು ಮುಖ್ಯವಾದ ಕೆಲಸಕ್ಕೆ ಉಪಯೋಗಿಸುತ್ತೇವೆ ಎಂಬಂತೆ ಆರೋಪಿ ಮತ್ತೆ ಈ ಚಾಲಕನ ನಡುವೆ ಮುಖ್ಯವಾಗಿ ಒಂದು ಚರ್ಚೆ ನಡೆದಿದೆ.

ಈತ ಒಂದು ದಿನದ ಬಾಡಿಗೆಗೆ ವಾಹನ ಕೊಟ್ಟು ಹಣ ತಗೋತ್ತಿದ್ದ. ಹೆಚ್ಚಿಗೆ ಬೇಕಾದ್ರು ಕೇಳು ಕೊಡ್ತೀವಿ ಅನ್ನುವ ಹಾಗೆ ಮಾತಾಡಿದ್ರು ಎಂಬ ವಿಚಾರವನ್ನು ಆತ ಬಹಿರಂಗಪಡಿಸಿದ್ದಾನೆ.

ಇವನು ಒಬ್ಬನೇ ಇದ್ದುದರಿಂದ ಮನಸ್ಸಿಗೆ ಬಂದಂತೆ ಹೇಳ್ತಾನೆ ಅದನ್ನ ಕೊಲಾಬರೇಟ್ ಮಾಡ್ಲಿಕ್ಕೆ ಇನ್ನೊಬ್ಬ ಸಿಕ್ಕಿದ್ರೆ ನಮಗೆ ತನಿಖೆಗೆ ಅನುಕೂಲವಾಗುತ್ತದೆ. ನಿನ್ನೆ ನಡೆದ ಶಾಂತಿಸಭೆಯಲ್ಲಿ ಕೂಡಾ ಹಲವರ ಅಹವಾಲು ಸಾಮಾಜಿಕ ಜಾಲತಾಣ ನಿಯಂತ್ರಣದಲ್ಲಿ ಇರಬೇಕು ಎಂದೇ ಆಗಿತ್ತು. ನಮ್ಮ ಆದ್ಯತೆ ಪ್ರಕರಣ ಪತ್ತೆ ಮಾಡುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು.

ಹಾಗಾಗಿ ನಮ್ಮ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಂಗಳೂರು ನಗರ ಮತ್ತು ದ.ಕ ಜಿಲ್ಲೆಯಲ್ಲಿ 5 ಪ್ರಕರಣ ದಾಖಲಿಸಿಕೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು