8:50 PM Monday23 - December 2024
ಬ್ರೇಕಿಂಗ್ ನ್ಯೂಸ್
ಸರಕಾರ ರೈತರ ಪರವಾಗಿದೆ: ಚನ್ನರಾಯಪಟ್ಟಣ ರೈತ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್…

ಇತ್ತೀಚಿನ ಸುದ್ದಿ

ವಿಶ್ವ ವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿ ಇತಿಹಾಸ ವಿಭಾಗದಿಂದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

31/07/2022, 14:04

ಮಾಧ್ಯಮ ಪ್ರಕಟಣೆ
ದಿನಾಂಕ 29/07/2022 ಶುಕ್ರವಾರದಂದು ವಿಶ್ವ ವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ *ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ : ವಸಾಹತು ಕಾಲಘಟ್ಟದ ಇತಿಹಾಸ ಕಥನ* ಎಂಬ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣವು ನಡೆಯಲ್ಪಟ್ಟಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಡಾ. ಎನ್. ಶ್ಯಾಮ್ ಭಟ್, ನಿವೃತ್ತ ಪ್ರೊಫೆಸರ್ ಹಾಗೂ ಮುಖ್ಯಸ್ಥರು ಇತಿಹಾಸ ವಿಭಾಗ ಗೋವಾ ವಿಶ್ವ ವಿದ್ಯಾಲಯ ಮತ್ತು ಡೀನ್, ಸಮಾಜ ವಿಜ್ಞಾನ ನಿಕಾಯ, ಗೋವಾ ವಿಶ್ವ ವಿದ್ಯಾಲಯ, ಭಾಗವಹಿಸಿದರು. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಸ್ತಾರ ಇತಿಹಾಸವನ್ನು ತೆರೆದಿಟ್ಟು, ರಾಷ್ಟ್ರ ಪ್ರೇಮ ಮೂಡಲು ಪ್ರೇರೆಪಿಸಿದರು. ಸ್ವಾತಂತ್ರ್ಯ ಹೋರಾಟದ ತ್ಯಾಗ ತಿಳಿಯಬೇಕಾದರೆ ಇತಿಹಾಸ ಓದಬೇಕು. ಆಚರಣೆಯೊಂದಿಗೆ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯ ಸಂಯೋಜಕರಾದ ಡಾ. ಜಯರಾಜ್ ಎನ್. ಇವರು ವಹಿಸಿಕೊಂಡು, ಸ್ವಾತಂತ್ರ್ಯದ ಹೋರಾಟದ ಘಟನಾವಳಿಗಳನ್ನು ತೆರೆದಿಡುತ್ತಾ ಇದರ ಫಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಅಂದರು. ಡಾ. ಸೀತಾರಾಮ ಪಿ., ಮುಖ್ಯಸ್ಥರು ಇತಿಹಾಸ ವಿಭಾಗ ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮಗಳ ಸಂಚಾಲಕರು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸ್ಪೂರ್ತಿ ಕೆ.ಟಿ. ಇವರು ಧನ್ಯವಾದಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯ ಮುಖಾಂತರ ಶುಭಾರಂಭ ಮಾಡಿದರು. ಉಪನ್ಯಾಸಕಿಯರಾದ ಡೀನಾ ಮತ್ತು ಶ್ರೀಮತಿ ದಿವ್ಯಾಶ್ರೀ ಜಿ. ಇವರು ನಿರೂಪಿಸಿದರು. ವೇದಿಕೆಯಲ್ಲಿ ಸೆಮಿನಾರ್ ನ ಸಹಸಂಚಾಲಕಿ ಶ್ರೀಮತಿ ಲೀಲಾವತಿ, ಇತಿಹಾಸ ಉಪನ್ಯಾಸಕಿ ಉಪಸ್ಥಿತರಿದ್ದರು.

ಮೊದಲ ಗೋಷ್ಠಿಯಲ್ಲಿ, ಡಾ. ಜಯರಾಜ್ ಎನ್ ಇವರ ಅಧ್ಯಕ್ಷತೆಯಲ್ಲಿ ಡಾ. ಎನ್ ಶ್ಯಾಮ್ ಭಟ್ ಇವರು *’ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ: ಕೆಲವು ದೃಷ್ಟಿಕೋನಗಳು’* ಎಂಬ ವಿಷಯದ ಕುರಿತಂತೆ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯಲ್ಲಿ ಆಂಗ್ಲ ಉಪನ್ಯಾಸಕಿ ವನಿತಾ ಪಿ. ಧನ್ಯವಾದಗಳನ್ನು ಸಮರ್ಪಿಸಿದರು. ಎರಡನೇಯ ಗೋಷ್ಠಿಯು ಡಾ. ನೊರ್ಬರ್ಟ್ ಮಸ್ಕರೇನಸ್, ಸಹಪ್ರಾಧ್ಯಾಪಕರು, ಫಿಲೋಮಿನಾ ಕಾಲೇಜು, ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರೊ. ಪೀಟರ್ ವಿಲ್ಸನ್ ಪ್ರಭಾಕರ್ , ನಿವೃತ್ತ ಇತಿಹಾಸ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ವಿವೇಕಾನಂದ ಕಾಲೇಜು, ಪುತ್ತೂರು ಇವರು *’ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಾಸೆಲ್ ಮಿಶನ್ ನ ಪಾತ್ರ’* ಹಾಗೂ ಡಾ.ಶ್ರೀದರ್ ನಾಯ್ಕ, ಮುಖ್ಯಸ್ಥರು, ಇತಿಹಾಸ ವಿಭಾಗ, ಫಿಲೋಮಿನಾ ಕಾಲೇಜು ಇವರು *’ಕಾಸರಗೋಡು ಸ್ವಾತಂತ್ರ್ಯ ಚಳುವಳಿ: ಗಾಂಧೀಜಿ ಪ್ರಭಾವ’* ಮತ್ತು ಡಾ. ಸೀತಾರಾಮ ಪಿ ಇವರು *’ಸ್ವಾತಂತ್ರ್ಯಪೂರ್ವ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಪತ್ರಿಕೆಗಳ ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ನಿರೂಪಣೆ’* ಎಂಬ ವಿಷಯಗಳ ಕುರಿತಂತೆ ವಿಷಯ ಮಂಡನೆ ಮಾಡಿದರು. ಶ್ರೀಮತಿ ನಿಶ್ಮಿತಾ ಪಿ ಸ್ವಾಗತಿಸಿದರು. ಶ್ರೀ ಸುರೇಶ್ ಕೆ ಧನ್ಯವಾದಗಳನ್ನು ಸಮರ್ಪಿಸಿದರು. ಈ ಗೋಷ್ಠಿಯ ನಿರೂಪಣೆಯನ್ನು ಶ್ರೀಮತಿ ಚಂದ್ರಕಲಾ ನಿರ್ವಹಿಸಿದರು. ಎಲ್ಲಾ ವಿಚಾರ ಗೋಷ್ಠಿಗಳಲ್ಲಿ ಸಭಿಕರೊಂದಿಗೆ ಸಂವಾದ ನಡೆಯಿತು. ಮುಂದಿನ ಗೋಷ್ಠಿಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಕುರಿತಂತೆ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ಲೀಲಾವತಿ, ಇತಿಹಾಸ ಉಪನ್ಯಾಸಕಿ ಇವರು ವಹಿಸಿಕೊಂಡು ನಿರ್ವಹಿಸಿದರು.



ಸಮಾರೋಪ ಸಮಾರಂಭದಲ್ಲಿ ಪ್ರೊ.ಪೀಟರ್ ವಿಲ್ಸನ್ ಪ್ರಭಾಕರ್ ಸಮಾರೋಪ ಮಾತುಗಳನ್ನು ಆಡುತ್ತಾ, ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ವಿಚಾರದ ಅರಿವಿನ ಸ್ಪಷ್ಟತೆಯ ಬಗ್ಗೆ ಉಲ್ಲೇಖಿಸುತ್ತಾ, ನೈಜ ಇತಿಹಾಸ ಕಟ್ಟುವುದರೊಂದಿಗೆ ಮರೆತುಹೋದ ಇತಿಹಾಸವನ್ನು ಪುನರ್ ರೂಪಿಸಬೇಕು ಅಂದರು. ಅಧ್ಯಕ್ಷತೆಯನ್ನು ಡಾ. ಜಯರಾಜ್ ಎನ್ ಇವರು ವಹಿಸಿಕೊಂಡು ಇತಿಹಾಸವನ್ನು ಅಧ್ಯಯನ ಮಾಡಿಯೇ ಮಾತಾಡಬೇಕು. ಇತಿಹಾಸದ ಘಟನಾವಳಿಗಳ ಕುರಿತಂತೆ ಬಾಲಿಶ ಹೇಳಿಕೆಗಳನ್ನು ಕೊಡಬಾರದು ಅಂದರು. ಸ್ವಾಗತವನ್ನು ಉಪನ್ಯಾಸಕಿ ಶ್ರೀಮತಿ ದಿವ್ಯಾ ಕೆ ಮಾಡಿದರೆ ಧನ್ಯವಾದಗಳನ್ನು ಶ್ರೀಮತಿ ಲೀಲಾವತಿ ಇವರು ಸಮರ್ಪಿಸಿದರು. ಶ್ರೀಮತಿ ವೆರೋನಿಕಾ ಪ್ರಭಾ ವಿ.ಪಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸೀತಾರಾಮ ಪಿ. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು