ಇತ್ತೀಚಿನ ಸುದ್ದಿ
ಆದೇಶ ರದ್ದು ಮಾಡಿದ ರಾಜ್ಯ ಸರಕಾರ: ಮತ್ತೊಮ್ಮೆ ಆನಂದ್ ಸಿಂಗ್ ಕೈತಪ್ಪಿದ ವಿಜಯನಗರ ಜಿಲ್ಲೆ ಉಸ್ತುವಾರಿ
31/07/2022, 13:13
ಬೆಂಗಳೂರು(reporterkarnataka.com): ರಾಜ್ಯ ಸರಕಾರ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆನಂದ್ ಸಿಂಗ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಶಿಕಲಾ ಜೊಲ್ಲೆ ನೇಮಿಸಿ ನಿನ್ನೆ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ, ಇಂದು ಮತ್ತೆ ರಾಜ್ಯ ಸರ್ಕಾರ ಈ ಆದೇಶವನ್ನು ರದ್ದು ಮಾಡಿದೆ. ಹೀಗಾಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿ ಆನಂದ್ ಸಿಂಗ್ ಮತ್ತು ವಿಜಯನಗರ ಜಿಲ್ಲೆ ಉಸ್ತುವಾರಿಯಾಗಿ ಶಶಿಕಲಾ ಜೊಲ್ಲೆ ಅವರು ಮುಂದುವರಿಯಲಿದ್ದಾರೆ.
ಇದರಿಂದ ವಿಜಯನಗರ ಜಿಲ್ಲೆ ಉಸ್ತುವಾರಿ ಕನಸು ಕಂಡಿದ್ದ ಸಚಿವ ಆನಂದ್ ಸಿಂಗ್ ಗೆ ನಿರಾಸೆಯಾದಂತಾಗಿದೆ.