4:49 PM Sunday6 - April 2025
ಬ್ರೇಕಿಂಗ್ ನ್ಯೂಸ್
Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ… Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ

ಇತ್ತೀಚಿನ ಸುದ್ದಿ

‘ಚಿನ್ನ’ದ ಹುಡುಗಿ ಮೀರಾಬಾಯಿ ಚಾನುಗೆ ಬಂಗಾರ: ಮೀರಾಬಾಯಿ ಸಾಧನೆಗೆ ರಾಷ್ಟ್ರಪತಿ ಅಭಿನಂದನೆ

31/07/2022, 13:09

ಹೊಸದಿಲ್ಲಿ(reporterkarnataka.com): 2020ರ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದು ಬಿಗಿದ್ದು, 49 ಕೆಜಿ ವಿಭಾಗದಲ್ಲಿ ಮೀರಾಬಾಯಿ, 201 ಕೆಜಿ ಭಾರವನ್ನು ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದಾರೆ.


ಸ್ನ್ಯಾಚ್‌ನಲ್ಲಿ 88KG, ಕ್ಲೀನ್ ಮತ್ತು ಜರ್ಕ್‌ನಲ್ಲಿ 113KG ತೂಕ ಎತ್ತಿದ ಮೀರಾಬಾಯಿ ಚಾನು, 2ನೇ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಂಗಾರವನ್ನು ಜಯಿಸಿದ್ದಾರೆ. ಇನ್ನು, 2018ರಲ್ಲಿ 49ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನ ಗೆದ್ದಿದ್ದರು.

ರಾಷ್ಟ್ರಪತಿ ಅಭಿನಂದನೆ: ‘ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ. ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತಕ್ಕೆ ಆಕೆಯ ಮೊದಲ ಚಿನ್ನದ ಪದಕ ದೇಶದಾದ್ಯಂತ ಸಂತೋಷ ಮತ್ತು ಸಂಭ್ರಮದ ಅಲೆಯನ್ನು ಸೃಷ್ಟಿಸಿದೆ. ಭಾರತವು ನಿಮ್ಮ ಮತ್ತು ನಿಮ್ಮ ಪದಕಗಳ ಬಗ್ಗೆ ಹೆಮ್ಮೆಪಡುತ್ತದೆ’, ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಟ್ವೀಟ್ ಮಾಡಿದ್ದಾರೆ.

*ಮೀರಾಬಾಯಿ ಗೆದ್ದ ಪದಕಗಳು:

➧ 2020 ಟೋಕಿಯೋ ಒಲಿಂಪಿಕ್ಸ್ – ಕಂಚು (49ಕೆಜಿ)

➧ 2017 ಅನಾಹೈಮ್ ವಿಶ್ವ ಚಾಂಪಿಯನ್ – ಚಿನ್ನ (48ಕೆಜಿ)

➧ 2020 ಏಷ್ಯನ್ ಚಾಂಪಿಯನ್ – ಬೆಳ್ಳಿ (49ಕೆಜಿ)

➧ 2014- ಕಾಮನ್‌ವೆಲ್ತ್‌ ಗೇಮ್ಸ್ – ಕಂಚು (48ಕೆಜಿ)

➧ 2018- ಕಾಮನ್‌ವೆಲ್ತ್‌ ಗೇಮ್ಸ್ – ಚಿನ್ನ (48ಕೆಜಿ)

➧ 2022- ಕಾಮನ್‌ವೆಲ್ತ್‌ ಗೇಮ್ಸ್ – ಚಿನ್ನ (49ಕೆಜಿ)

➧ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳು – 2013, 2017, 2019ರಲ್ಲಿ ಚಿನ್ನ ಹಾಗೂ 2015ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು