ಇತ್ತೀಚಿನ ಸುದ್ದಿ
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ: ಬಾಳೆಹೊನ್ನೂರು ಸಂಪೂರ್ಣ ಬಂದ್; ವಾಹನ ಸಂಚಾರ ಸ್ಥಗಿತ
29/07/2022, 09:32
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಎನ್ ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಂದ್ ಆಚರಿಸಲಾಯಿತು. ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ನೀಡಿದರು.
ಪ್ರವೀಣ್ ಹತ್ಯೆಗೆ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಪರ ಸಂಘಟನೆಗಳು ಬಾಳೆಹೊನ್ನೂರು ಪಟ್ಟಣ ಬಂದ್ ಗೆ ಕರೆ ನೀಡಿತ್ತು.ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಿನ್ನೆ ಕೊಪ್ಪ ಸೇರಿದಂತೆ ಜಯಪುರ, ಹರಿಹರಪುರ ಹೋಬಳಿ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು