ಇತ್ತೀಚಿನ ಸುದ್ದಿ
ಪ್ರವೀಣ್ ಹತ್ಯೆ: ಕೊಪ್ಪ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸುಭಾಷ್ ಚಂದ್ರ ಕೊಳೆಗೋಡು ರಾಜೀನಾಮೆ
28/07/2022, 23:03
ಕೊಪ್ಪರಿಗೆ(reporterkarnataka.com):
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಖಂಡಿಸಿ ಕೊಪ್ಪ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆಸುಭಾಷ್ ಚಂದ್ರ ಕೊಳೆಗೋಡು ರಾಜೀನಾಮೆ ನೀಡಿದ್ದಾರೆ.
ಹಿಂದುತ್ವದ ಆಧಾರದಲ್ಲಿ ಹಿಂದುತ್ವ ಮತ್ತು ರಾಷ್ಟ್ರಿಯತೆಗಾಗಿ ಭಾರತೀಯ ಜನತಾ ಪಾರ್ಟಿಯನ್ನು ನನ್ನಂತ ಹಲವಾರು ಕಾರ್ಯಕರ್ತರು ಬೆಂಬಲಿಸಿ ಕೆಲಸ ಮಾಡುತ್ತಿದ್ದು, ಅಂತಹ ಕಾರ್ಯಕರ್ತರಿಗೆ ಪದೇ ಪದೇ ಇಂತಹ ಸಮಸ್ಯೆ ಎದುರಗುತ್ತಿದ್ದೂ ಇವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ನಮ್ಮದ್ದೆಲ್ಲ ಆಗಬೇಕು. ಧರ್ಮಕ್ಕಾಗಿ ಪ್ರಾಣ ನೀಡಿದ ಇಂತಹ ಹಲವಾರು ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.