ಇತ್ತೀಚಿನ ಸುದ್ದಿ
ಸುರತ್ಕಲ್: ತಲವಾರು ದಾಳಿಗೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು
28/07/2022, 21:42
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಸಾ ಪ್ರವೃತ್ತಿ ಮತ್ತೆ ಮುಂದುವರಿಸಿದ್ದು, ನಗರದ ಸುರತ್ಕಲ್ ನಲ್ಲಿ ಯುವಕನೊಬ್ಬನ ಮೇಲೆ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಲಾಗಿದೆ.
ದಾಳಿಗೀಡಾದ ಯುವಕ ಸಾವನ್ನಪ್ಪಿದ್ದು ಯುವಕನನ್ನು ಮಂಗಳಪೇಟೆ ಸಮೀಪದ ನಿವಾಸಿ ಮುಹಮ್ಮದ್ ಫಾಝಿಲ್ ಎಂದು ಗುರುತಿಸಲಾಗಿದೆ. ಸುರತ್ಕಲ್ ಪೇಟೆಯ ಚಪ್ಪಲಿ ಅಂಗಡಿಯೊಂದರ ಎದುರುಗಡೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಸಿಸಿ ಕ್ಯಾಮೆರಾದ ಮೊರೆ ಹೋಗಿದ್ದಾರೆ.