ಇತ್ತೀಚಿನ ಸುದ್ದಿ
ಹೈ ಪ್ರೊಫೈಲ್ ಸೆಕ್ಸ್ ಹಗರಣ: ಬೆಂಗಳೂರಿನ ಯುವತಿ ಸಹಿತ 11 ಮಂದಿ ಅರೆಸ್ಟ್: ರಾಜಕಾರಣಿಗಳು ಭಾಗಿ?
25/07/2022, 19:49
ಬೆಂಗಳೂರು(reporterkarnataka.com):
ಛತ್ತೀಸಗಢದ ರಾಯ್ಪುರದ ಸ್ಟಾರ್ ಹೋಟೆಲ್ ನಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳ ಯುವತಿಯರನ್ನು ಇಟ್ಟುಕೊಂಡು ನಡೆಸುತ್ತಿದ್ದ ಭಾರೀ ದಂಧೆ ಬೆಳಕಿಗೆ ಬಂದಿದೆ.
ಅಪರಾಧ ನಿಗ್ರಹ ಮತ್ತು ಸೈಬರ್ ಘಟಕದ ಸಿಬ್ಬಂದಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಬಯಲಿಗೆ ಎಳೆದಿದ್ದಾರೆ.
ಈ ಘಟನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೆಂಗಳೂರಿನ ಯುವತಿ ಸೇರಿದಂತೆ 11 ಮಂದಿ ಯುವತಿಯರು ಹಾಗೂ ಒಬ್ಬ ಕಿಂಗ್ಪಿನ್ನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಯುವತಿ ಹೊರತುಪಡಿಸಿ ನೇಪಾಳ, ಮುಂಬೈ, ದೆಹಲಿ, ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ.
ಇನ್ನು ಇವರ ಸ್ಮಾರ್ಟ್ಫೋನ್ಗಳನ್ನು ತನಿಖೆಗೆ ಒಳಪಡಿಸಿದಾಗ ಬೆಂಗಳೂರಿನ ಯುವತಿ ಸೇರಿದಂತೆ ಬಹುತೇಕ ಯುವತಿಯರ ಫೋನ್ನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಸೇವ್ ಆಗಿದ್ದು, ಅವರಿಗೆ ಈ ಯುವತಿಯರು ಕರೆ ಮಾಡಿರುವುದು ತಿಳಿದು ಬಂದಿದೆ. ಆದರೆ ಸದ್ಯ ತನಿಖೆಯ ಹಂತದಲ್ಲಿರುವ ಕಾರಣ, ಯಾರ ಹೆಸರನ್ನೂ ಪೊಲೀಸರು ಬಹಿರಂಗಪಡಿಸಲಿಲ್ಲ.
ಹೋಟೆಲ್ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿದ್ದ ಬಗ್ಗೆ ರಾಯ್ಪುರ್ ಪೊಲೀಸ್ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕಕ್ಕೆ ದೂರು ನೀಡಲಾಗಿತ್ತು. ಇದಕ್ಕೋಸ್ಕರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಎಸ್ಎಸ್ಪಿ ಅಭಿಷೇಕ್ ಮಹೇಶ್ವರಿ ಅವರ ಸೂಚನೆಯಂತೆ ಹೋಟೆಲ್ಗೆ ವಿಶೇಷ ತಂಡ ಲಗ್ಗೆಹಾಕಿತ್ತು. ಈ ವೇಳೆ, ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧಿಗಳ ಬಂಧನ ಮಾಡಿದ್ದಾರೆ.