8:54 PM Sunday6 - July 2025
ಬ್ರೇಕಿಂಗ್ ನ್ಯೂಸ್
ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಮೂಡುಬಿದರೆ: ಮಹಾಕವಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ ದ ‘ಮಂದಾರ ಮಂಥನ’ ಸಂಪನ್ನ

24/07/2022, 08:12

ಮೂಡುಬಿದರೆ(reporterkarnataka.com): ಮೂಡುಬಿದರೆಯ ಆಳ್ವಾಸ್ ತುಳು ಅಧ್ಯಯನ ಕೇಂದ್ರ ಮತ್ತು ಮಂದಾರ ಪ್ರತಿಷ್ಠಾನದ ಸಹಯೋಗದಲ್ಲಿ ತುಳು ವಾಲ್ಮೀಕಿ, ಮಹಾಕವಿ, ಮಂದಾರ ಕೇಶವ ಭಟ್ಟರ “ಮಂದಾರ ರಾಮಾಯಣ”ದ ವಾಚನ ಮತ್ತು ವ್ಯಾಖ್ಯಾನ -“ಮಂದಾರ ಮಂಥನ” ಕಾರ್ಯಕ್ರಮ ಶನಿವಾರ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಪ್ರಭಾಕರ ಜೋಶಿ ನೆರವೇರಿಸಿದರು. ಬಳಿಕ ಮಾತನಾಡಿದ ಡಾ. ಜೋಶಿ ಅವರು, ಹಲವರು ಹಲವು ರೀತಿಯಲ್ಲಿ ರಾಮಾಯಣವನ್ನು ಬರೆದರು, ವ್ಯಾಖ್ಯಾನಿಸಿದರು. ಮಂದಾರ ರಾಮಾಯಣದಲ್ಲಿ ಕವಿ ಮಂದಾರರು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಬಹಳ ಸುಲಭ ಆಡು ಭಾಷೆಗಳನ್ನೇ ಬಳಸಿ ರಾಮಾಯಣವನ್ನು ಬರೆದಿರುವುದು ವಿಶೇಷವೇ ಸರಿ ಎಂದರು.

ಮಂದಾರರ ಮತ್ತು ತನ್ನ ಸುಮಾರು 30 ವರ್ಷಗಳ ಸಂಬಂಧವನ್ನು ವಿದ್ಯಾರ್ಥಿಗಳಿಗೆ ಅವರು ವಿವರಿಸಿದರು. ಮುಖ್ಯ ಅತಿಥಿಗಳಾಗಿ  ಡಾ. ರಾಜೇಶ್ ಆಳ್ವ (ಅಧ್ಯಕ್ಷರು, ತುಳು ವರ್ಲ್ಡ್ ), ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕುರಿಯನ್, ಮಂದಾರ ಕೇಶವ ಭಟ್ಟರ ಮಗಳು ಶಾರದಾಮಣಿ, ಪತ್ರಕರ್ತರಾದ ಡಾ. ರಾಜೇಶ್ ಭಟ್ ಮಂದಾರ ಆಗಮಿಸಿದ್ದರು.


ಮಂದಾರ ರಾಮಾಯಣದ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಡಾ. ದಿನಕರ ಪಚ್ಚನಾಡಿ, ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ಕಂಠದಿಂದ ಉತ್ತಮವಾಗಿ ಮೂಡಿ ಬಂತು.   ಆಳ್ವಾಸ್ ಶಿಕ್ಷಣ ಸಂಸ್ಥೆಯ ತುಳು ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ  ಮಾಡಿದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಮೋದ್ ಸಪ್ರೆ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು