1:59 PM Tuesday27 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಯಾರಿಗೆ ಯಾವ ಪ್ರಶಸ್ತಿ…? ಅತ್ಯುತ್ತಮ ನಟ, ನಟಿ ಪ್ರಶಸ್ತಿ ಯಾರಿಗೆ?

23/07/2022, 00:20

ಹೊಸದಿಲ್ಲಿ(reporterkarnataka.com): 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಲಾಗಿದ್ದು, ಒಟ್ಟು 400 ಸಿನಿಮಾಗಳು ಸ್ಪರ್ಧೆ ಭಾಗಿಯಾಗಿದ್ದವು. 30 ವಿವಿಧ ಭಾಷೆಯ ಸಿನಿಮಾಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿ

ದ್ದವು. ಒಟ್ಟು 50 ವಿಭಾಗದಲ್ಲಿ ಸಿನಿಮಾಗಳು ಸ್ಪರ್ಧೆ ಮಾಡಿದ್ದವು.

ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ. ಸೂರರೈ ಪೊಟ್ರು ಸಿನಿಮಾದ ಉತ್ತಮ ಅಭಿನಯಕ್ಕೆ ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ನಜ ಅಜಯ್ ದೇವಗನ್ ಸಹ ಅತ್ತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ತನ್ಹಾಜಿ ಸಿನಿಮಾದ ಉತ್ತಮ ಅಭಿನಯಕ್ಕೆ ಈ ಪ್ರಶಸ್ತಿ ಗೆದ್ದಿದ್ದಾರೆ.

ಉತ್ತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಅಪರ್ಣಾ ಬಲಾಮುರಳಿ ಗೆದ್ದಿದ್ದಾರೆ. ಸೂರರೈ ಪೊಟ್ರು ಸಿನಿಮಾದಲ್ಲಿ ಅತ್ಯುತ್ತಮ ನಟನೆಗೆ ಅಪರ್ಣಾ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾರೆ.

ಇನ್ನು ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ಮಲಯಾಳಂನ ಖ್ಯಾತ ನಟ ಬಿಜು ಮೆನನ್ ಗೆದ್ದಿದ್ದಾರೆ. ಅಯ್ಯಪ್ಪನುಂ ಕೊಶಿಯುಂ ಚಿತ್ರಕ್ಕಾಗಿ ಬಿಜು ಮೆನನ್ ಅವರಿಗೆ ಅತ್ಯುತ್ತಮ ಪೋಷಕ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ಅವರಿಗೆ ಲಭಿಸಿದೆ. ತಮಿಳಿನ ಶಿವರಂಜಿನಿಯುಂ ಇನ್ನುಂ ಸಿಲಾ ಪೆಂಗಲುಂ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಅತ್ಯುತ್ತಮ ಚಿತ್ರ: ಸೂರರೈ ಪೊಟ್ರು.

ಅತ್ಯುತ್ತಮ ನಟ: ಸೂರ್ಯ (ಸೂರರೈ ಪೊಟ್ರು) ಮತ್ತು ಅಜಯ್ ದೇವಗನ್ (ತನ್ಹಾಜಿ).

ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು).

ಅತ್ಯುತ್ತಮ ಗೀತರಚನೆಕಾರ: ಮನೋಜ್ ಮುಂತಾಶಿರ್ (ಸೈನಾ).

ಅತ್ಯುತ್ತಮ ಹಿಂದಿ ಚಿತ್ರ: ಟೂಲ್ಸಿದಾಸ್ ಜೂನಿಯರ್

ಅತ್ಯುತ್ತಮ ದಿಮಾಸಾ ಚಿತ್ರ: ಸೆಕ್ಮ್ ಖೋರ್.

ಅತ್ಯುತ್ತಮ ತುಳು ಚಿತ್ರ: ಜೀತಗೆ.

ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ

ಅತ್ಯುತ್ತಮ ತಮಿಳು ಚಿತ್ರ: ಶಿವರಂಜಿನಿಯುಮ್ ಇನ್ನುಮ್ ಸಿಲಾ ಪೆಂಗಲುಮ್.

ಅತ್ಯುತ್ತಮ ಮಲಯಾಳಂ ಚಿತ್ರ: ಥಿಂಕಲಾಝ್ಚಾ ನಿಷ್ಕಯಂ.

ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು.

ಅತ್ಯುತ್ತಮ ಬಂಗಾಳಿ ಚಿತ್ರ: ಅವಿಜಾತ್ರಿಕ್.

ಅತ್ಯುತ್ತಮ ಅಸ್ಸಾಮಿ ಚಿತ್ರ: ಬ್ರಿಡ್ಜ್.

*ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿಗಳು:*

ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್ ಭಾರದ್ವಾಜ್ (ಮರೇಂಗೆ ತೋ ವಹಿನ್ ಜಾ ಕರ್).

ಅತ್ಯುತ್ತಮ ಛಾಯಾಗ್ರಹಣ: ನಿಖಿಲ್ ಎಸ್ ಪ್ರವೀಣ್ (ಶಬ್ದಕುನ್ನ ಕಾಳಪ್ಪ).

ಅತ್ಯುತ್ತಮ ತನಿಖಾ ಚಿತ್ರ: ದಿ ಸೇವಿಯರ್: ಬ್ರಿಗೇಡಿಯರ್ ಪ್ರೀತಮ್ ಸಿಂಗ್.

ಅತ್ಯುತ್ತಮ ಎಕ್ಸ್ ಪ್ಲೋರೇಶನ್ ಚಿತ್ರ: ವ್ಹೀಲಿಂಗ್ ದಿ ಬಾಲ್.

*ಅತ್ಯುತ್ತಮ ಶೈಕ್ಷಣಿಕ ಚಿತ್ರ:*

 ಡ್ರೀಮಿಂಗ್ ಆಫ್ ವರ್ಡ್ಸ್ (ಮಲಯಾಳಂ).

ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಜಸ್ಟೀಸ್ ಡಿಲೇಡ್ ಬಟ್ ಡೆಲಿವರ್ಡ್ ಮತ್ತು ತ್ರೀ ಸಿಸ್ಟರ್ಸ್.

ಅತ್ಯುತ್ತಮ ಪ್ರಮೋಷನಲ್ ಚಿತ್ರ: ಸರ್ಮೌಂಟಿಂಗ್ ಚಾಲೆಂಜ್ಸ್.

ಅತ್ಯುತ್ತಮ ಜೀವನಚರಿತ್ರೆ ಚಿತ್ರ: ಪಬುಂಗ್ ಶ್ಯಾಮ್ (ಮಣಿಪುರಿ).

ಅತ್ಯುತ್ತಮ ನಾನ್-ಫೀಚರ್ ಫಿಲ್ಮ್: ಟೆಸ್ಟಿಮೆಂಟೇಶನ್ ಆಫ್ ಅನಾ (ಡಾಂಗಿ).

ಇತ್ತೀಚಿನ ಸುದ್ದಿ

ಜಾಹೀರಾತು