ಇತ್ತೀಚಿನ ಸುದ್ದಿ
ಯೋಗವನ್ನು ಶಿಕ್ಷಣದಲ್ಲಿ ಅಳವಡಿಸಬೇಕು: ಮಂಗಳೂರು ವಿವಿ ಕುಲಪತಿ ಪ್ರೊ. ಯಡಪಡಿತ್ತಾಯ
21/06/2021, 22:29
ಮಂಗಳೂರು(reporterkarnataka news): ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ರಾ.ಸೇ.ಯೋ. ಕೋಶದ ವತಿಯಿಂದ ಯೋಗ ದಿನಾಚರಣೆ ಜರುಗಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಎಸ್. ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗ 5 ಆಯಾಮಗಳಲ್ಲಿ ಕ್ಷೇಮಾಭಿವೃದ್ಧಿ ಯನ್ನು ಮಾಡುತ್ತದೆ. ಶಾರೀರಿಕ ಬೆಳವಣಿಗೆ ಮಾನಸಿಕ ಸ್ಥೈರ್ಯ ಆರೋಗ್ಯ ಭಾಗ್ಯ ಬೌದ್ಧಿಕ ಮಟ್ಟದ ಬೆಳವಣಿಗೆ ಸಾಮಾಜಿಕ ಸೌಹಾರ್ದತೆ ಹಾಗೂ ಆಧ್ಯಾತ್ಮಿಕತೆಗೆ ಪೂರಕವಾಗಿದೆ. ಇದನ್ನು ಶಿಕ್ಷಣ ದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಸಂಸ್ಕೃತ ವಿಶ್ವವಿದ್ಯಾನಿಲಯದ ಪ್ರೊ. ಗಿರೀಶ್ ಚಂದ್ರ ಮಾತನಾಡಿ, ಶರೀರದ ಮನಸ್ಸಿನ ಆತ್ಮದ ಜೊತೆಗೆ ನಡೆಸುವ ಸಂವಾದವೇ ಯೋಗ ಎಂದರು.
ಗೌರವ ಅತಿಥಿಯಾಗಿ ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲ್, ಕಾಲೇಜಿನ ಪ್ರೊ. ಸಂಪತ್ ಶುಭ ಹಾರೈಸಿದರು.
ಅಕ್ಷಯ ಕಾಲೇಜಿನ ರಾ.ಸೇ.ಯೋ ವಿದ್ಯಾರ್ಥಿನಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಣಮ್ಯ ಯೋಗಾಸನದ ವಿವಿಧ ಭಂಗಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ. ಮಾತನಾಡಿ, ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದು ನಮ್ಮ ಭಾರತ. ನಮ್ಮ ಹೆಮ್ಮೆ, ಯೋಗ ಒಂದು ಉತ್ಕೃಷ್ಟ ಜೀವನಶೈಲಿ ಎಂದರು.
ಕೋವಿಡ್ ನೋಡಲ್ ಅಧಿಕಾರಿಗಳಾದ ಡಾ.ಶೇಸಪ್ಪ ಅಮೀನ್,ವನಿತ್ ಕುಮಾರ್,ಹಾಗೂ ಪ್ರವೀಣ್ ಶೆಟ್ಟಿ, ಯೋಗ ಗುರು ಹೇಮಾ ಚಂದ್ರ ಹಾಸ್ ಮತ್ತಿತರರು ಉಪಸ್ಥಿತರಿದ್ದರು.