ಇತ್ತೀಚಿನ ಸುದ್ದಿ
ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಇಡಿ, ಐಟಿ ಬಳಕೆ: ಮಂಗಳೂರು ಪ್ರತಿಭಟನೆಯಲ್ಲಿ ಮಧು ಬಂಗಾರಪ್ಪ ಆರೋಪ
22/07/2022, 14:03
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಬ್ರಿಟಿಷರು ಒಡೆದು ಆಳುವ ಮೂಲಕ ನಮ್ಮೊಳಗೆ ಬಿರುಕು ತಂದರೆ, ಬಿಜೆಪಿ ಆಡಳಿತ ನಮ್ಮನ್ನು ಅಧೋಗತಿಗೆ ಇಳಿಸಿದೆ. ಕೇಂದ್ರ ಸರಕಾರ ಇಡಿ, ಐಟಿಯನ್ನು ರಾಜಕೀಯಕ್ಕಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಆಪಾದಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅನಾವಶ್ಯಕವಾಗಿ ತೊಂದರೆ ನೀಡಲು ಇಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಡಿ ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಯಿತು. ಇದೀಗ ಸೋನಿಯಾ ಗಾಂಧಿ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಇಡಿ ವಿಚಾರಣೆಯ ನೆಪದಲ್ಲಿ ಬಿಜೆಪಿಯಿಂದ ಹೆದರಿಸುವ ಪ್ರಯತ್ನ ನಡೆಯುತ್ತಿದೆ. ಅದರೆ ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದರು.
ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಮಾಜಿ ಮೇಯರ್ ಗಳಾದ ಕವಿತಾ ಸನಿಲ್, ಶಶಿಧರ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಯುವ ಕಾಂಗ್ರೆಸ್ಮುಂ ಅಧ್ಯಕ್ಷ ಮಿಥುನ್ತಾ ರೈ, ಕಾರ್ಪೊರೇಟರ್ಆ ಪ್ರವೀಣ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.