2:07 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಸರ್ವೆ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರ ಮರು ಸೇರ್ಪಡೆಗೆ ಸರಕಾರಕ್ಕೆ ಒತ್ತಾಯ

21/07/2022, 11:26

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com  

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಲೂಕ ಕಚೇರಿ ಮುಂದೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘ ಕೂಡ್ಲಿಗಿ ಇವರಿಂದ ತಹಶೀಲ್ದಾರ್ ಮುಖಾಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸಿ ಜಿಲ್ಲೆಯ ಕೂಡ್ಲಿಗಿ ಸರ್ವೆ ಪಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸೇರ್ಪಡೆ ಮಾಡಲು ಒತ್ತಾಯಿಸಲಾಯಿತು.

ದೇವದಾಸಿಯರಿಗೆ ಒಂದು ವರ್ಷದಿಂದ ಬಾಕಿ ಇರುವ ಪೆನ್ಷನ್ ಹಣ ಕೂಡಲೇ ಬಿಡುಗಡೆ ಮಾಡಬೇಕು. ಸರ್ವೇ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸೇರ್ಪಡೆ ಮಾಡಲು ಒತ್ತಾಯಿಸಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವುದರ ಮೂಲಕ ಮನವಿ ಪತ್ರವನ್ನು ತಹಶೀಲ್ದಾರರ ಸಮ್ಮುಖದಲ್ಲಿ ಉಪ ತಹಶಿಲ್ದಾರ್  ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವದಾಸಿಯರ ಬೇಡಿಕೆಗಳಾದ ಒಂದು ವರ್ಷದಿಂದ ಬಾಕಿ ಪೆನ್ಷನ್ ಹಣ ಬಿಡುಗಡೆ ಮಾಡಬೇಕು, ಸರ್ಕಾರವೇ ಘೋಷಣೆ ಮಾಡಿದ ಪೆನ್ಷನ್ 500 ಜಾರಿ ಮಾಡಬೇಕು ಹಾಗೂ ಸರ್ವೆಪಟ್ಟಿಯಿಂದ ಬಿಟ್ಟು ಹೋದಂತೆ ಮಹಿಳೆಯರನ್ನು ಪುನಃ ಸರ್ವೇಪಟ್ಟಿಗೆ ಸೇರ್ಪಡೆ ಮಾಡಬೇಕು ಹಾಗೂ ಎಲ್ಲಾ ದೇವದಾಸಿ ಮಹಿಳೆಯರಿಗೆ ಉಪಕಸುಬು ಮಾಡಲು 5 ಲಕ್ಷ ಸಾಲ ಸೌಲಭ್ಯ ನೀಡಬೇಕು. ಇದರಲ್ಲಿ ಶೇಕಡ 25ರಷ್ಟು ಹಾಗೂ ಪ್ರತಿದಿನ ಕುಟುಂಬಕ್ಕೆ 80*80 ಚದರ ಅಡಿಯ ಜಾಗ ನೀಡಿ ನಿವೇಶನ ವಸತಿ ಕಲ್ಪಿಸಬೇಕು, ದೇವದಾಸಿ ಮಹಿಳೆಯರಿಗೆ ಕೃಷಿಗೆ ಯೋಗ್ಯವಾದ 5 ಎಕರೆ ಭೂಮಿಯನ್ನು ಕೊಡಬೇಕು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಹೀಗೆ ಹತ್ತಾರು ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ದೇವದಾಸಿ ವಿಮೋಚನ ಸಂಘದ ತಾಲೂಕು ಅಧ್ಯಕ್ಷರಾದ ಕನಕೇರಿ ವೆಂಕಮ್ಮ ಅವರು ಮಾತನಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಹಾಗೂ ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿಯಾದ ಗುನ್ನಳ್ಳಿ ರಾಘವೇಂದ್ರ ಹಾಗೂ ತಾಲೂಕು ದೇವದಾಸಿ ಸಂಘದ ಕಾರ್ಯದರ್ಶಿಯಾದ ದುರ್ಗಮ್ಮ, ದೇವಕ್ಕ, ಹುಲಿಗಮ್ಮ, ಬಸಮ್ಮ, ಉಚ್ಚೆಂಗಮ್ಮ, ಸೋಮಕ್ಕ, ವಿಜಯಮ್ಮ, ಅಂಜಿನಮ್ಮ ಸೇರಿದಂತೆ‌ ಇನ್ನು ಮುಂತಾದವರು  ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು