ಇತ್ತೀಚಿನ ಸುದ್ದಿ
ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಸಿಎ ಪದವಿ ಪಡೆದ ಮಂಗಳೂರಿನ ಕೆನರಾ ಸಂಧ್ಯಾ ಕಾಲೇಜು ವಿದ್ಯಾರ್ಥಿಗಳು
20/07/2022, 21:36
ಮಂಗಳೂರು(reporterkarnataka.com):ಮೇ 2022ನೇ ವರ್ಷದಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆನರಾ ಸಂಧ್ಯಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಧನಂಜಯ್ ಶೇಟ್ ಹಾಗೂ ಗೌರವ ಭಟ್ ಅವರಿಗೆ ಜುಲೈ 19, 2022 ರಂದು ಗೌರವಿಸಲಾಯಿತು.
“ನಾವು ಕೈಗೆತ್ತಿಕೊಂಡ ಕೆಲಸದಲ್ಲಿ ತೃಪ್ತಿ ಇರಬೇಕು, ಆತ್ಮವಿಶ್ವಾಸ , ನೈತಿಕತೆಯೊಂದಿಗೆ ಸಾಧನೆಯ ಹಾದಿಯಲ್ಲಿ ಬೆಂಬಲ ನೀಡಿದವರ ಸ್ಮರಣೆ ಸದಾ ಇದ್ದರೆ ಯಶಸ್ಸು ಖಚಿತ” ಎಂದು ಕಾಲೇಜಿನ ಸಂಚಾಲಕ ಸಿಎ ವಾಮನ್ ಕಾಮತ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಗುಟ್ಟನ್ನು ಎಲ್ಲಾ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.
ಕಾಲೇಜಿನ ವಿದ್ಯಾರ್ಥಿನಿ ಸಹನಾ ಪ್ರಾರ್ಥನೆಗೈದರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿಲ್ ಕಾಮತ್ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉಷಾ ನಾಯಕ್ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ರಿತಿಕಾ ದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸನ್ಮಾನ ಸಮಾರಂಭದಲ್ಲಿ ಕೆನರಾ ಆಡಳಿತ ಮಂಡಳಿಯ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣ್ಯೆ, ಟಿ. ಗೋಪಾಲಕೃಷ್ಣ ಶೆಣ್ಯೆ, ಸುರೇಶ್ ಕಾಮತ್, ಡಾ. ಪ್ರೇಮಲತಾ ವಿ, ಪ್ರಾಂಶುಪಾಲರು ಕೆನರಾ ಕಾಲೇಜು ಹಾಗೂ ಸಾಧನೆಗೈದ ವಿದ್ಯಾರ್ಥಿಗಳ ಹೆತ್ತವರೂ ಉಪಸ್ಥಿತರಿದ್ದರು.