ಇತ್ತೀಚಿನ ಸುದ್ದಿ
ಜನಸಾಮಾನ್ಯರ ಆಕ್ರೋಶಕ್ಕೆ ಮಣಿದ ಸರಕಾರ: ಹಾಲು-ಮೊಸರು ರೇಟ್ ಇಳಿಸಲು ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ
19/07/2022, 09:11
ಬೆಂಗಳೂರು(reporterkarnataka.com): ಜಿಎಸ್‌ಟಿ ವಿನಾಯಿತಿ ರದ್ದುಗೊಂಡಿರುವುದರಿಂದ ರಾಜ್ಯದಲ್ಲಿ ಹಾಲು, ಮೊಸರು ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಜನಸಾಮಾನ್ಯರ ವಿರೋಧವನ್ನು ಪರಿಗಣಿಸಿ ನಂದಿನಿ ಹಾಲು, ಮೊಸರು ಬೆಲೆ ಇಳಿಕೆಗೆ ಕೆಎಂ ಎಫ್ ಗೆ ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಹೊಸ GST ನೀತಿ ಜಾರಿ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳಾದ ಮೊಸರಿಗೆ 3 ರೂ. ಪನ್ನೀರ್ ಕೆಜಿಗೆ 15 ರೂ. ಹಾಗೂ ಇನ್ನಿತರೆ ಹಾಲಿನ ಉತ್ಪನ್ನಗಳಿಗೆ ಬೆಲೆ ಏರಿಕೆ ಮಾಡಲಾಗಿತ್ತು. ಜುಲೈ 18 ರಿಂದ ಹೊಸ ದರಗಳು ಜಾರಿಗೆ ಬಂದಿದ್ದವು. ದರ ಇಳಿಕೆ ಯಾವತ್ತಿನಿಂದ ಜಾರಿಯಾಗುತ್ತದೆ ಅನ್ನುವ ಬಗ್ಗೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.