ಇತ್ತೀಚಿನ ಸುದ್ದಿ
ಕೆರ್ವಾಶೆ: ಮನೆಗೆ ನುಗ್ಗಿ ವೃದ್ಧನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕಳ್ಳತನಕ್ಕೆ ಯತ್ನ; ಟಾರ್ಚ್ ಕಸಿದು ಪರಾರಿಯಾದ ಚೋರರು
18/07/2022, 22:00
ಕಾರ್ಕಳ(reporterkarnataka.com): ಮೆಣಸಿನ ಹುಡಿ ಎರಚಿ ಮನೆಗೆ ನುಗ್ಗಿ ಕಳ್ಳತನ ನಡೆಸಲು ಯತ್ನಿಸಿದ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆಯಲ್ಲಿ ಜು18 ರ ಮಧ್ಯರಾತ್ರಿ ನಡೆದಿದೆ.
ಕೆರ್ವಾಶೆ ಕೃಷ್ಣಭಟ್ (71) ಎಂಬುವವರ ದೇವಿಕೃಪಾ ಮನೆಯಲ್ಲಿ ಈ ಘಟನೆ ನಡೆದಿದೆ .
ಕೃಷ್ಣಭಟ್ ಅವರು ಜು.18 ರಂದು ತಡರಾತ್ರಿ 1:30 ಗಂಟೆಯ ಸಮಯಕ್ಕೆ ಮನೆಯ ಹೊರಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆ ಬಾಗಿಲನ್ನು ತೆರೆದು ಹೊರಗೆ ಬಂದಾಗ ಯಾರೋ 2 ಜನ ಅಪರಿಚಿತರಿದ್ದು, ಓರ್ವ ಇವರ ಮುಖಕ್ಕೆ ಮೆಣಸಿನ ಪುಡಿಯನ್ನು ಎಸೆದು, ಇನ್ನೊಬ್ಬನು ಗಟ್ಟಿಯಾಗಿ ಹಿಡಿದು ಪಂಚೆಯನ್ನು ಹಿಡಿದೆಳೆದು ಅದನ್ನು ಅವರ ಮುಖಕ್ಕೆ ಸುತ್ತಿ ಕೂಗಾಡದಂತೆ ಬಾಯಿ ಹಾಗೂ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಕೂಡಲೇ ಕೃಷ್ಣ ಭಟ್ ರವರು ತಪ್ಪಿಸಿಕೊಂಡು ಜೋರಾಗಿ ಬೊಬ್ಬೆ ಹೊಡೆದಾಗ ಇವರ ಕೈಯಲ್ಲಿದ್ದ ಟಾರ್ಚನ್ನು ತೆಗೆದುಕೊಂಡು ಇಬ್ಬರು ಅಪರಿಚಿತರು ಅಲ್ಲಿಂದ ಓಡಿ ಹೋಗಿದ್ದಾರೆ. ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.