ಇತ್ತೀಚಿನ ಸುದ್ದಿ
‘ಮಿಸ್ ಇಂಡಿಯಾ- 2022’ ವಿಜೇತೆ ಸಿನಿ ಶೆಟ್ಟಿ ಜುಲೈ 19ರಂದು ಹುಟ್ಟೂರು ಬೆಳ್ಳಂಪಳ್ಳಿಗೆ ಭೇಟಿ
18/07/2022, 10:15
ಉಡುಪಿ(reporterkarnataka.com): ಮಿಸ್ ಇಂಡಿಯಾ 2022 ವಿಜೇತೆ ಸಿನಿ ಶೆಟ್ಟಿ ಅವರು ಜುಲೈ 19ರಂದು ಹುಟ್ಟೂರಾದ ಉಡುಪಿಯ ಬೆಳ್ಳಂಪಳ್ಳಿಗೆ ಆಗಮಿಸಲಿದ್ದಾರೆ.
ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಜಯಗಳಿಸಲೆಂದು ಪ್ರಾರ್ಥನೆ ಸಲ್ಲಿಸುವ ನಿಟ್ಟಿನಲ್ಲಿ ಅಂದು ಸಂಜೆ 5.30ಕ್ಕೆ ಬೆಳ್ಳಂಪಳ್ಳಿಯ ಭೂತರಾಜ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಲಿದ್ದಾರೆ. ಬಳಿಕ ಸಿನಿ ಶೆಟ್ಟಿ ಅವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿಯ ಮುಕ್ತೇಸರರಾದ ಶುಭಕರ ಬಳ್ಳಾಲ್, ಸುರೇಶ್ ಬಳ್ಳಾಲ್ ಹಾಗೂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ ತಿಳಿಸಿದ್ದಾರೆ.