ಇತ್ತೀಚಿನ ಸುದ್ದಿ
ವಾಹನ ಮಾಲೀಕರಿಗೆ ವಂಚನೆ: ಸ್ಯಾಂಡಲ್ ವುಡ್ ನಟಿ ರಾಗಿಣಿ ಸ್ನೇಹಿತ ರವಿಶಂಕರ್ ಬಂಧನ
17/07/2022, 22:19
ಬೆಂಗಳೂರು(reporterkarnataka.com): ವಂಚನೆ ಪ್ರಕರಣದಲ್ಲಿ ಸ್ಯಾಂಡಲ್‍ವುಡ್ ಖ್ಯಾತ ನಟಿಯ ಸ್ನೇಹಿತನನ್ನು ಪೋಲೀಸರು ಮತ್ತೆ ಬಂಧಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಕುರಿತು ವಿಚಾರಣೆ ವೇಳೆ ನಟಿ ರಾಗಿಣಿಯ ಸ್ನೇಹಿತ ಎಂದು ಸಿಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಆರ್ ಟಿಒ ಎಸ್‍ಡಿಎ ರವಿಶಂಕರ್ ನನ್ನು ಬೆಂಗಳೂರು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ವಾಹನ ಮಾಲೀಕರಿಂದ ತೆರಿಗೆ ಹಣ ಪಡೆದು, ಅದನ್ನು ಕಟ್ಟದೇ ಲಕ್ಷಾಂತರ ರೂ. ವಂಚಿಸಿದ ಆರೋಪದ ಮೇಲೆ ಅಜಯ್ & ರವಿಶಂಕರ್ ನನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.