ಇತ್ತೀಚಿನ ಸುದ್ದಿ
ರಣಮಳೆಗೆ ಸಾಕ್ಷಿಯಾಗುತ್ತಿದೆ ಕಾಫಿನಾಡು: ಚಿಕ್ಕಮಗಳೂರಿನ ಬಿಕ್ಕರಣೆಯಲ್ಲಿ ತೇಲಿ ಬಂದ ಮಹಿಳೆಯ ಮೃತದೇಹ!
17/07/2022, 01:00
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಕಾಫಿನಾಡು ಚಿಕ್ಕಮಗಳೂರು ಭೀಕರ ಮಳೆಗೆ ಸಾಕ್ಷಿಯಾಗಿದೆ. ನೆರೆ ನೀರಿನಲ್ಲಿ ಮಾನವ ಮತ್ತು ಪ್ರಾಣಿಗಳ ಮೃತದೇಹಗಳು ತೇಲಿ ಹೋಗುವ ಭಯಾನಕ ದೃಶ್ಯಕ್ಕೆ ಜನರು ಸಾಕ್ಷಿಯಾಗುತ್ತಿದ್ದಾರೆ.
ಭದ್ರಾ ನದಿಯಲ್ಲಿ ಮಹಿಳೆಯ ಮೃತದೇಹ ತೇಲಿಬಂದಿದೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಸಮೀಪ ತೇಲಿ ಹೋಗ್ತಿರೋ ಮೃತ ದೇಹವನ್ನು ಸ್ಥಳೀಯರು ನೋಡಿದ್ದಾರೆ. ಹಸುವಿನ ಮೃತದೇಹ ಹೆಬ್ಬಾಳೆ ಸೇತುವೆ ಮೇಲೆ ಬಂದು ಬಿದ್ದಿದೆ.