ಇತ್ತೀಚಿನ ಸುದ್ದಿ
ಕಪಿತಾನಿಯೋ: ಭಾರೀ ಗಾತ್ರದ ಮರ ಬಿದ್ದು ವಿದ್ಯುತ್ ಕಂಬ ಧರಾಶಾಯಿ; ವಾಹನ ಜಖಂ
15/07/2022, 19:16
ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು:Reporterkarnataka.com:ನಗರದ ಕಪಿತಾನಿಯೋ ಬೋರ್ಡ್ ಶಾಲಾ ಹಿಂಬದಿ ಹೊಸಮನೆ ಕಾಂತಪ್ಪ ರಸ್ತೆಯ ಮಧ್ಯೆ ಭಾರೀ ಗಾತ್ರದ ಮರವೊಂದು ಬಿದ್ದು ವಿದ್ಯುತ್ ತಂತಿಗಳು ರಸ್ತೆ ಮಧ್ಯೆ ಬಿದ್ದು ಖಾಸಗಿ ಕಂಪನಿ ವಾಹನ ಜಖಂಗೊಂಡಿದೆ.
ಸ್ಥಳಕ್ಕೆ ಮೆಸ್ಕಾಂ ಅಸಿಸ್ಟೆಂ ಟ್ ಇಂಜಿನಿಯರ್ ವಿಶ್ವಾಸ್, ಮೆಸ್ಕಾಂ ಸಿಬ್ಬಂದಿಗಳು ಕಾರ್ಪೋರೇಶನ್, ಪಾಂಡೇಶ್ವರ ಅಗ್ನಿಶಾಮಕ ಅಧಿಕಾರಿ ಪ್ರವೀಣ್,ಎಸ್.ಡಿ.ಆರ್.ಎಫ್ ತಂಡ ತೆರವು ಕಾರ್ಯಾಚರಣೆ ನಡೆಸಿದರು.
ಕಾರ್ಪೋರೇಶನ್ ಇಂಜಿನಿಯರ್ ಪದ್ಮ, ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಮರ ತೆರವು ಕಾರ್ಯದಲ್ಲಿ ಕೈಜೋಡಿಸಿದರು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.