8:58 PM Monday27 - October 2025
ಬ್ರೇಕಿಂಗ್ ನ್ಯೂಸ್
ಮತ ಚೋರಿ ತಡೆಗೆ ಕೈ ಕಾರ್ಯಪಡೆ!: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳ… Chikkamagaluru | ಚಾರ್ಮಾಡಿ ಘಾಟಿಯಲ್ಲಿ ಕಾರು ಪಲ್ಟಿ: 3 ಮಂದಿ ಪ್ರಾಣಾಪಾಯದಿಂದ ಪಾರು Kodagu | ಸುಂಟಿಕೊಪ್ಪ: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ಹೃದಯಘಾತದಿಂದ ದಾರುಣ ಸಾವು ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Bangaluru | ರಾಜ್ಯ ಸರಕಾರಕ್ಕೆ ಕೆಎಸ್ ಡಿಎಲ್ ರಿಂದ 135 ಕೋಟಿ ಡಿವಿಡೆಂಡ್… ಬೆಂಗಳೂರು ಲಾಡ್ಜ್‌ನಲ್ಲಿ ಯುವತಿ ಜತೆ ತಂಗಿದ್ದ ಯುವಕನ ಸಾವಿಗೆ ಕಿಡ್ನಿ ವೈಫಲ್ಯ ಕಾರಣ:… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಆಟೋ ಚಾಲಕನ ಮೇಲೆ ಹಲ್ಲೆ: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ… ಕೊಡ್ಲಿಪೇಟೆಯಲ್ಲಿ ಉದ್ಯಮಿ ಮೇಲೆ ಲಾರಿ ಹರಿಸಿ ಕೊಲೆ ಯತ್ನ: ವಾಹನ ಬಿಟ್ಟು ಚಾಲಕ…

ಇತ್ತೀಚಿನ ಸುದ್ದಿ

ಸಂಬಳದ ಹೆಂಡ್ತಿಯಾಗಲು ಪ್ರಶಸ್ತಿ ವಿಜೇತ ನಟಿಗೆ ಉದ್ಯಮಿ ಆಫರ್: ಆತ ಫಿಕ್ಸ್ ಮಾಡಿದ ತಿಂಗಳ ಸ್ಯಾಲರಿ ಎಷ್ಟು ಗೊತ್ತೆ?

15/07/2022, 08:22

ಮುಂಬೈ(reporterkarnataka.com):
ಉದ್ಯಮಿಯೊಬ್ಬರು ತಮ್ಮ ಸಂಬಳದ ಹೆಂಡತಿಯಾಗಲು ಖ್ಯಾತ ನಟಿಯೊಬ್ಬಳಿಗೆ ಆಫರ್ ನೀಡಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಂದರ್ಶನವೊಂದರಲ್ಲಿ ನಟಿ ನೀತು ಚಂದ್ರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಿಂಗಳಿಗೆ 25 ಲಕ್ಷ ನೀಡುವುದಾಗಿ ಆಫರ್ ಮಾಡಿದ್ದರು ಎಂದು  ನೀತು ಚಂದ್ರ ಹೇಳಿದ್ದಾರೆ.

ನಟಿ ನೀತು ಚಂದ್ರ, ’13 ರಾಷ್ಟ್ರೀಯ ಪ್ರಶಸ್ತಿ ವಿಜೇತರ’ ಜೊತೆ ಕೆಲಸ ಮಾಡಿದರೂ, ಈಗ ನನ್ನತ್ರ ಹಣವೂ ಇಲ್ಲ, ಕೆಲಸವೂ ಇಲ್ಲ ಎಂದು ಹೇಳಿದ್ದಾರೆ. ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕರೊಬ್ಬರು ಆಡಿಷನ್ ಮಾಡಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ ಒಂದು ಗಂಟೆಯೊಳಗೆ ತಿರಸ್ಕರಿಸಿದರು ಎಂದು ನೆನಪಿಸಿಕೊಂಡ ನೀತು. ತನ್ನ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ನೀತು ಚಂದ್ರ ಅವರು ಗರಂ ಮಸಾಲಾ (2005) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಗಗನಸಖಿಯ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದೀಚೆಗೆ ಅವರು ಟ್ರಾಫಿಕ್ ಸಿಗ್ನಲ್, ಒನ್ ಟೂ ತ್ರೀ, ಓಯ್ ಲಕ್ಕಿ ಲಕ್ಕಿ ಓಯೆ, ಅಪಾರ್ಟ್‌ಮೆಂಟ್, 13 ಬಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೆಫಾಲಿ ಶಾ, ರಾಹುಲ್ ಬೋಸ್ ಮತ್ತು ಸುಮೀತ್ ರಾಘವನ್ ಜೊತೆಗಿನ ಕುಚ್ ಲವ್ ಜೈಸಾ ನಟಿ ನೀತು ಚಂದ್ರ ಅವರ ಕೊನೆಯ ಹಿಂದಿ ಚಿತ್ರವಾಗಿದೆ.

ಇನ್ನು, ಓಯೆ ಲಕ್ಕಿ ಲಕ್ಕಿ ಓಯೆ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ನೀತೂ ಅಭಿನಯದ ಮಿಥಿಲಾ ಮಖಾನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು