ಇತ್ತೀಚಿನ ಸುದ್ದಿ
ಕಾರ್ಕಳದ ನಂದಳಿಕೆ ಸಮೀಪ ಇನ್ನೋವಾ- ಸ್ಕೂಟರ್ ಭೀಕರ ಅಪಘಾತ: 2 ಬಲಿ
10/07/2022, 17:06
ಕಾರ್ಕಳ(reporterkarnataka.com) : ಇನ್ನೋವಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು ಇಬ್ಬರು ಸವಾರರು ಸಾವನ್ನಪ್ಪಿದ ಘಟನೆ ಬೆಳ್ಮಣ್ ಸಮೀಪದ ನಂದಳಿಕೆ ಮಾವಿನ ಕಟ್ಟೆ ಬಳಿ ಭಾನುವಾರ ನಡೆದಿದೆ.
ಅಪಘಾತದಲ್ಲಿ ಇಬ್ಬರು ಅಣ್ಣತಮ್ಮಂದಿರಾದ ಸಂದೀಪ್ ಮತ್ತು ಸತೀಶ್ ಮೃತಪಟ್ಟಿದ್ದಾರೆ.
ನಿಟ್ಟೆಯಿಂದ ನಂದಳಿಕೆ ಕಡೆಗೆ ಬರುತ್ತಿದ್ದ ಸ್ಕೂಟರ್ ನಲ್ಲಿ ಸಂದೀಪ್ ಸತೀಶ್ ಬರುತ್ತಿದ್ದು , ಪಡುಬಿದ್ರೆಯಿಂದ ವೇಗವಾಗಿ ಬರುತಿದ್ದ ಇನ್ನೋವಾ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಓರ್ವ ಸ್ಥಳದಲ್ಲೆ ಮೃತಪಟ್ಟಿದ್ದು, ಇನ್ನೊಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಕಾರ್ಕಳ ಗ್ರಾಮಾಂತರ ಠಾಣೆ ಪೋಲಿಸರು ಸ್ಥಳಕ್ಕೆ ಅಗಮಿಸಿ ತನಿಖೆ ನಡೆಸುತ್ತಿದ್ದಾರೆ.