ಇತ್ತೀಚಿನ ಸುದ್ದಿ
ವಂಚನೆ ತಪ್ಪಿಸಲು, ನಾಗರಿಕ ಸಮಾಜ ರಕ್ಷಿಸಲು ಆನ್‍ಲೈನ್ ಸ್ಕಿಲ್ ಗೇಮ್ ನಿಯಂತ್ರಿಸಿ: ಸಮೀರ್ ಬಾರ್ಡೆ
20/06/2021, 19:22

ಮಂಗಳೂರು(reporterkarnataka news): ವಂಚನೆ ತಪ್ಪಿಸಲು ಹಾಗೂ ನಾಗರಿಕ ಸಮಾಜ ರಕ್ಷಿಸಲು, ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಮುಂದಾಗಿರುವ ಕುರಿತು ಟಿಒಆರ್‍ಎಫ್‍ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸಮೀರ್ ಬಾರ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕರ್ನಾಟಕದ ಸಿಐಡಿಯ ಇತ್ತೀಚಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸಿದೆ.
ಕರ್ನಾಟಕ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಅನ್ವಯ ಈ ಹಗರಣವು ಜನರಿಗೆ ಮೋಸಗೊಳಿಸಲು ವಂಚನೆಯ ಹೂಡಿಕೆ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಆನ್‍ಲೈನ್ ಗೇಮ್ ಇತ್ಯಾದಿ ಮಾರ್ಗಗಳನ್ನು ಕಂಡುಕೊಂಡಿದ್ದರು. ಇದಕ್ಕೆ ಚೀನಾದ ಸಂಪರ್ಕವೂ ಇದೆ ಎನ್ನಲಾಗಿದೆ. ಆನ್‍ಲೈನ್ ಸ್ಕಿಲ್ ಗೇಮಿಂಗ್ ವಲಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವನ್ನು ಎತ್ತಿ ತೋರಿಸಿದೆ.