11:40 PM Tuesday28 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಂತೆ ಸರಕಾರ ಪದೇ ಪದೇ ನಕಾರಾತ್ಮಕ ನಿಲುವು ತಾಳುವುದು ಸರಿಯಲ್ಲ,: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ 

08/07/2022, 22:54

ಉಡುಪಿ(reporterkarnataka.com):
ಸಾರ್ವಕಾಲಿಕ ಸತ್ಯನಿಷ್ಠವಾದ ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಂತೆ ಸರ್ಕಾರವು ಪದೇ ಪದೇ ನಕಾರಾತ್ಮಕ ನಿಲುವನ್ನು ಪ್ರಕಟಿಸುತ್ತಿರುವುದು ಸಮಂಜಸವಲ್ಲ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರ ಪ್ರವೀಣ್ ಎಂ. ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣರಾಜ್ಯೋತ್ಸವ ಟ್ಯಾಬ್ಲೋ ತಿರಸ್ಕಾರದ ಬಳಿಕ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಗುರುಗಳ ಚಿಂತನೆಯ ಪಾಠವನ್ನು ಕೈಬಿಟ್ಟಿರುವುದರ ಕುರಿತು ಈಗಾಗಲೇ ಸಚಿವರುಗಳಿಗೆ ಮನವಿ ಸಲ್ಲಿಸಿದಾಗ ಯಾವುದೇ ಸಮಸ್ಯೆಯಾಗದಂತೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು‌.ಆದರೆ ಇದು ಸುಳ್ಳಾಗಿದ್ದು ಗುರುಗಳನ್ನು ಕೇವಲ ಭಾಷಾ ಪಾಠದಲ್ಲಿ ತೋರಿಸಿ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ನಂಬಿಸಿದ್ದಾರೆ. ಗುರುಗಳ ಅನುಯಾಯಿಗಳಾದ ನಮಗೆ ಸರ್ಕಾರದ ನಡೆಯ ಕುರಿತು ತೀವ್ರ ಅಸಮಾಧಾನವಿದ್ದು ಈಗಾಗಲೇ ನೀಡಿರುವ ಮನವಿಯನ್ನು ಕಡೆಗಣಿಸಿರುವ ಕುರಿತು ಸಂಘಟನಾ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವಮಾನವೇ ಸಮಾಜ ಸುಧಾರಣೆಗೆ ಸೀಮಿತವಾಗಿರುವಾಗ ನಾವೂ ಕೂಡ ಪಕ್ಷಾತೀತವಾಗಿ ಸಮಾಜದ ಪರ ಸಮಾನಮನಸ್ಕ ನಿಲುವಿನಲ್ಲಿ ಗುರುಗಳ ಪಠ್ಯಕ್ರಮ ಈ ಹಿಂದಿನಂತೆ ಯಥಾಸ್ಥಿತಿಯಲ್ಲಿರಬೇಕೆಂದು ಬಯಸುತ್ತೇವೆ. ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ವಿರೋಧಿಸಬೇಕು, ಕೇವಲ ಅಧಿಕಾರಕ್ಕೋಸ್ಕರ ಗುರುಗಳನ್ನು ಜಪಿಸುವ ಬದಲು ಯಾವ ಪಕ್ಷದ ಯಾವ ಪ್ರತಿನಿಧಿಯೆ ಆಗಲಿ ಸದ್ರಿ ಹಾಗೂ ಮುಂದೆಯೂ ಗುರುಗಳಿಗೆ ಅವಮಾನವಾಗದಂತೆ ನಡೆಯುವುದು ಸಾಮಾಜಿಕ ಸೌಹಾರ್ದ ಸ್ಥಿತಿಗತಿಗೆ ಅತ್ಯಂತ ಅಗತ್ಯ ಎಂದು ಭಾವಿಸುತ್ತೇವೆ ಎಂದು ಪ್ರವೀಣ್ ಎಂ ಪೂಜಾರಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು